Homeಅಂಕಣಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳ ನೇಮಕಾತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಒಟ್ಟು 500 ಹುದ್ದೆಗಳು ಈ ನೇಮಕಾತಿಯಲ್ಲಿ ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ 40 ಹುದ್ದೆಗಳನ್ನು ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ ಹಾಗೂ ಅರ್ಜಿ ಸಲ್ಲಿಸಲು ಸಪ್ಟೆಂಬರ್ 17ರವರೆಗೆ ಅವಕಾಶ ನೀಡಲಾಗಿದೆ. 

Union Bank Recruitment 2024 – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ವಿವರ, ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ ಹಾಗೂ ಇತರೆ ಮಾಹಿತಿಯನ್ನು ಕೆಳಗಿನ ಅಂಕಣದಲ್ಲಿ ನೀಡಲಾಗಿದೆ.

Union Bank Recruitment 2024 Details-ನೇಮಕಾತಿ ವಿವರ: 

ಈ ಒಂದು ನೇಮಕಾತಿಯು ಒಂದು ವರ್ಷದ ಅವಧಿಗೆ ಆಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷದ ಉದ್ಯೋಗ ತರಬೇತಿ ನೀಡಲಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಗತ್ಯವಿರುವ ವಿವಿಧ ಕೌಶಲಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.

Education qualification-ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳೇನು? 

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಲೆ, ವಾಣಿಜ್ಯ ವಿಜ್ಞಾನ ಇಂಜಿನಿಯರಿಂಗ್ ಸೇರಿದಂತೆ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರಬೇಕು. ವಯೋಮಿತಿ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಅಭ್ಯರ್ಥಿಗಳು ಕನಿಷ್ಠ 20ರಿಂದ 28 ವರ್ಷ ಅವಧಿಯಲ್ಲಿರಬೇಕು.

Monthy Salary-ಆಯ್ಕೆಯಾಗುವವರಿಗೆ ಸಿಗುವ ಮಾಸಿಕ ವೇತನವೇಷ್ಟು?

ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ, ತರಬೇತಿಯ ಜೊತೆಗೆ ಮಾಸಿಕ ₹15,000/- ರೂ. ನೀಡಲಾಗುತ್ತದೆ.

How to Register? ನೊಂದಾಯಿಸಿಕೊಳ್ಳುವುದು ಹೇಗೆ? 

ಅರ್ಹರಿರುವ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಇದಕ್ಕೆ ನೊಂದಾಯಿಸಿಕೊಳ್ಳಲು ಬೇಕಾಗಿರುವ ಅಧಿಕೃತ ಜಾಲತಾಣದ ಲಿಂಕನ್ನು ಕೆಳಗೆ ನೀಡಲಾಗಿದೆ.

Application fee-ನೋಂದಾಯಿಸಿಕೊಳ್ಳಲು ಅರ್ಜಿ ಶುಲ್ಕ : 

• Gen, OBC ವರ್ಗದ ಅಭ್ಯರ್ಥಿಗಳಿಗೆ – 800ರೂ.• SC, ST ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ – 600ರೂ.• ಅಂಗವಿಕಲ ಅಭ್ಯರ್ಥಿಗಳಿಗೆ – 400ರೂ.

Last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 17, 2024

Website links-ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :

• ಅರ್ಜಿ ಸಲ್ಲಿಸುವ ಲಿಂಕ್ – Click here

• ಅಧಿಸೂಚನೆ –  Download Now

Related Articles

Leave a Reply

Your email address will not be published. Required fields are marked *

Back to top button