ಅದಾನಿ ಗ್ಯಾನ್ ಜ್ಯೋತಿ ವತಿಯಿಂದ ಸ್ಕಾಲರ್ ಶಿಪ್; ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

(AGJ Scholarship) ಬಿಎ ಎಕನಾಮಿಕ್ಸ್, ಬಿ.ಎಸ್ಸಿ ಎಕನಾಮಿಕ್ಸ್ ಹಾಗೂ ಇನ್ನೀತರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಅದಾನಿ ಗ್ಯಾನ್ ಜ್ಯೋತಿ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅಡಾನಿ ಗ್ರೂಪ್ ಈ ವಿದ್ಯಾರ್ಥಿವೇತನವನ್ನು ಮೊದಲ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಯಾತ್ರೆಗೆ ಸಹಾಯ ನೀಡಲು ಒದಗಿಸುತ್ತಿದೆ, ಆಂಧ್ರಪ್ರದೇಶ, ರಾಜಸ್ಥಾನ್, ಗುಜರಾತ್, ಓಡಿಶಾ ಮತ್ತು ಛತ್ತೀಸ್ಗಡದ ನಿವಾಸಿಗಳು (ಡೋಮಿಸೈಲ್) ಮತ್ತು JEE, NEET, CLAT, CA ಫೌಂಡೇಶನ್ ಮತ್ತು ಅರ್ಥಶಾಸ್ತ್ರ ಸಂಬಂಧಿತ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿದ್ದಾರೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
* ಇದು ಆಂಧ್ರ ಪ್ರದೇಶ, ರಾಜಸ್ಥಾನ್, ಗುಜರಾತ್, ಓಡಿಶಾ ಮತ್ತು ಛತ್ತೀಸ್ಗಢದ ನಿವಾಸಿ (ಡೋಮಿಸೈಲ್) ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶವಾಗಿದೆ.
* ಬಿಎ ಎಕನಾಮಿಕ್ಸ್, ಬಿ.ಎಸ್ಸಿ ಎಕನಾಮಿಕ್ಸ್, ಬಿ.ಇಸಿ, ಬಿ.ಇ/ಬಿ.ಟೆಕ್., ಇಂಟಿಗ್ರೇಟೆಡ್ 5-ಇಯರ್ ಡ್ಯುವಲ್ ಡಿಗ್ರಿ, ಎಂ.ಟೆಕ್, ಎಂಬಿಬಿಎಸ್ ಮತ್ತು ಎಲ್ಎಲ್ಬಿ ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
* ಅರ್ಜಿದಾರರು 2023ರ ನಂತರ ತಮ್ಮ ಹೈಯರ್ ಸೆಕೆಂಡರಿ/ ಪ್ರಿ-ಯುನಿವರ್ಸಿಟಿ/ ಇಂಟರ್ಮೀಡಿಯೇಟ್/ ಸಿಬಿಎಸ್ಸಿ/ ಐಎಸ್ಸಿ ಅಥವಾ ತತ್ಸಮಾನ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಪ್ರವೇಶವು ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಮೆರಿಟ್ ಶ್ರೇಣಿಯನ್ನು ಆಧರಿಸಿರಬೇಕು.
* ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು ರೂ. 4,50,000ವನ್ನು ಮೀರಬಾರದು
ಎಷ್ಟು ಸ್ಕಾಲರ್ ಶಿಪ್ ಲಭ್ಯ:
3,50,000
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/AGSP5 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
07-10-2024