ಮೌಲ್ವಿಗೆ ಮಹಿಳೆಯರು ಧರ್ಮದೇಟು ನೀಡಿದ್ದೇಕೆ?
ಚಿನ್ನ ದ್ವಿಗುಣಗೊಳಿಸಿವುದಾಗಿ ವಂಚನೆ: ಮೌಲ್ವಿ ವಿರುದ್ಧ ಮಹಿಳೆಯರ ಆರೋಪ
ಬಳ್ಳಾರಿ: ತಾಲೂಕಿನ ಹೊಸಯರ್ರಗುಡಿ ಗ್ರಾಮದ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಮೌಲ್ವಿ ಖಾದರ್ ಭಾಷಾಗೆ ಗ್ರಾಮದ ಕೆಲ ಜನರು ದಿನಕ್ಕೊಬ್ಬರಂತೆ ತಮ್ಮ ಮನೆಗಳಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದರಂತೆ. ಆದರೆ, ಊಟಕ್ಕೆಂದು ಹೋದ ಮೌಲ್ವಿ ಖಾದರ್ ಭಾಷಾ ಮಾತ್ರ ಚಿನ್ನ ದ್ವಿಗುಣಗೊಳಿಸುವ ಆಮಿಷ ಒಡ್ಡುತ್ತಿದ್ದನಂತೆ. ಅಕ್ಕಿಯಲ್ಲಿಟ್ಟು ಚಿನ್ನ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಸುಮಾರು ಹತ್ತು ಜನರಿಗೆ ವಂಚಿಸಿದ್ದನಂತೆ. ಸುಮಾರು 8 ತೊಲೆ ಚಿನ್ನಾಭರಣ, ಒಂದೂವರೆ ಲಕ್ಷ ರೂಪಾಯಿ ಲಪಟಾಯಿಸಿ ಎಸ್ಕೇಪ್ ಆಗಿದ್ದನಂತೆ. ಕೊಪ್ಪಳದಲ್ಲಿ ತಲೆ ಮರೆಸಿಕೊಂಡಿದ್ದ ಮೌಲ್ವಿ ಖಾದರ್ ಭಾಷಾ ಇಂದು ಗ್ರಾಮದ ಮಹಿಳೆಯರ ಕೈಗೆ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.
ಮೌಲ್ವಿಯನ್ನು ಹಿಡಿದು ಥಳಿಸಿದ ಮಹಿಳೆಯರು ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೇವಲ ಇದೊಂದು ಗ್ರಾಮ ಮಾತ್ರವಲ್ಲದೆ ಹೊಸಪೇಟೆಯ ಮಲ್ಲಪ್ಪನಗುಡಿ ಗ್ರಾಮ ಸೇರಿದಂತೆ ವಿವಿದೆಡೆ ಇದೇ ರೀತಿ ವಂಚಿಸಿದ್ದಾನೆಂದು ಮಹಿಳೆಯರು ಆರೋಪಿಸಿದ್ದಾರೆ. ಮೌಕಾ ಠಾಣೆಯ ಪೊಲೀಸರು ಆರೋಪಿ ಖಾದರ್ ಭಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.