Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ರೆ ಈ ದಾಖಲೆ ಕಡ್ಡಾಯ; ಇಲ್ಲ ಅಂದ್ರೆ ದಂಡ ಫಿಕ್ಸ್!

(HSRP -number plate) ರಾಜ್ಯದ ಎಲ್ಲಾ ವಾಹನಗಳಿಗೆ HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ನೀಡಿದ್ದ ಗಡುವು ಮೂರು ದಿನಗಳಲ್ಲಿ ಅಂದರೆ, ಸೆಪ್ಟೆಂಬರ್‌ 15 ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಯಾವುದೇ ಕಾರಣಕ್ಕೂ ಮತ್ತಷ್ಟು ಸಮಯ ನೀಡದೆ ದಂಡ ಪ್ರಯೋಗಕ್ಕೆ ಮುಂದಾಗಲು ಕರ್ನಾಟಕ ಸಾರಿಗೆ ಇಲಾಖೆ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, HSRP ನಂಬರ್‌ ಪ್ಲೇಟ್‌ ಅಳವಡಿಸಲು 2023 ರ ಆಗಸ್ಟ್‌ ನಿಂದ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ವಿಸ್ತರಣೆ ಮಾಡಲಾಗಿದೆ. ವಿಸ್ತರಣೆಗೂ ಒಂದು ಮಿತಿ ಇರುತ್ತದೆ. ಹೀಗಾಗಿ, ಸೆಪ್ಟೆಂಬರ್‌ 15 ರ ನಂತರ ವಿಸ್ತರಣೆ ಇರುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 2019 ರ ಏ.1 ಕ್ಕೂ ಮೊದಲು ನೋಂದಣಿಯಾದ 2 ಕೋಟಿ ವಾಹನಗಳು HSRP ಅಳವಡಿಸಿಕೊಳ್ಳಬೇಕಿದೆ. ಅದರಲ್ಲಿ 52 ಲಕ್ಷ ವಾಹನಗಳಿಗೆ ಮಾತ್ರ HSRP ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳಿಗೆ HSRP ಅಳವಡಿಸಲು ಬಾಕಿ ಇದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಅಳವಡಿಕೆ ಹೇಗೆ?
https://transport.karnataka.gov.in ಅಥವಾ www.siam.in ಜಾಲತಾಣಕ್ಕೆ ಭೇಟಿ ನೀಡಿ, Book HSRP ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
* ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
* HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
* HSRP ಶುಲ್ಕವನ್ನು ಆನ್‌ ಲೈನ್‌ ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.

* ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ. ರವಾನಿಸಲಾಗುವುದು.

* ನಿಮ್ಮಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
* ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.
* ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.

HSRP ನಂಬರ್‌ ಪ್ಲೇಟ್‌ ಅಳವಡಿಸಲು ಸಾರಿಗೆ ಇಲಾಖೆ ಮೊದಲ ಬಾರಿ 2023 ರಲ್ಲಿ ಮೂರು ತಿಂಗಳು ಅವಕಾಶ ನೀಡಲಾಗಿತ್ತು. ವಾಹನ ಮಾಲೀಕರಿಂದ ಸ್ಪಂದನೆ ಸಿಗದ ಹಿನ್ನೆಲೆ 2024 ಫೆಬ್ರವರಿ 17 ರವರೆಗೆ, ಆ ಬಳಿಕ ಮೇ 31 ರವರೆಗೆ ಗಡುವು ನೀಡಿತ್ತು. ಆ ನಂತರ ಹೈಕೋರ್ಟ್‌ ಸೂಚನೆ ಮೇರೆಗೆ ಸೆಪ್ಟೆಂಬರ್‌ 15 ವರೆಗೂ ಅವಕಾಶ ನೀಡಿದೆ.

ನೋಂದಣಿ ಮಾಡಿಕೊಂಡ ಕೂಡಲೇ ಹೊಸ ನಂಬರ್‌ ಪ್ಲೇಟ್‌ ಬರುವುದಿಲ್ಲ. ಯಾರೆಲ್ಲಾ ಸೆಪ್ಟೆಂಬರ್‌ 15 ರ ಒಳಗೆ HSRP ನೋಂದಣಿ ಮಾಡಿಕೊಳ್ಳುತ್ತಾರೋ ಅವರು ಅದರ ರಶೀದಿಯನ್ನು ವಾಹನ ಚಲಾಯಿಸುವಾಗ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಬೇಕು. ಈ ಮೂಲಕ ಸಾರಿಗೆ ಅಧಿಕಾರಿಗಳು ಅಥವಾ ಪೊಲೀಸರು ತಪಾಸಣೆ ನಡೆಸುವಾಗ ನಂಬರ್‌ ಪ್ಲೇಟ್‌ ಇಲ್ಲ ಎಂದು ಪ್ರಶ್ನಿಸಿದರೆ ರಶೀದಿ ತೋರಿಸಿ ದಂಡದಿಂದ ತಪ್ಪಿಸಿಕೊಳ್ಳಬಹುದು.

ಮುಂದಿನ 3 ದಿನಗಳ ಒಳಗೆ HSRP ಬಾಕಿ ಉಳಿಸಿಕೊಂಡ ವಾಹನ ಮಾಲೀಕರು ನೋಂದಣಿ ಮಾಡಿಕೊಳ್ಳಿ. ಇಲ್ಲದಿದ್ದರೆ ದಂಡ ಪಾವತಿಗೆ ಸಿದ್ಧರಾಗಬೇಕಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button