Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಮಹಿಳೆಯರಿಗೆ ಗುಡ್ ನ್ಯೂಸ್ : ಉದ್ಯೋಗಿನಿ ಯೋಜನೆಯಡಿ ಸಿಗಲಿದೆ 3 ಲಕ್ಷ ಸಾಲ ಸೌಲಭ್ಯದ ಜೊತೆ ಶೇ.50ರಷ್ಟು ಸಬ್ಸಿಡಿ

(Udyogini- Yojana) 2015-2016 ರಲ್ಲಿ ಪ್ರಾರಂಭಿಸಿದ ಉದ್ಯೋಗಿನಿ ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಸಾಮಾನ್ಯ ವರ್ಗದ ಮಹಿಳೆಯರಿಗೆ 3 ಲಕ್ಷದವರೆಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡಲು ಕರ್ನಾಟಕ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಅದರಲ್ಲಿ ಈ ಯೋಜನೆಯು ಒಂದು.

ಈ ಯೋಜನೆಯಲ್ಲಿ ಮಹಿಳಾ ಫಲಾನುಭವಿಗಳು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಗರಿಷ್ಠ 3,00,000 ರೂ.ಗಳವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಅಲ್ಲದೆ ಸಾಲದ ಮೇಲೆ ಸಬ್ಸಿಡಿಯನ್ನು ಸಹ ನೀಡುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಮೊತ್ತದ ಮೇಲೆ ಶೇ.50ರಷ್ಟು ಸಹಾಯಧನ ನೀಡಲಾಗುವುದು. ವಿಶೇಷ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಸಾಲದ ಮೊತ್ತದ ಮೇಲೆ 30% ಸಬ್ಸಿಡಿ ನೀಡಲಾಗುವುದು.

ಹಾಗೆಯೇ ಎಸ್ಸಿ/ಎಸ್ಟಿ ವರ್ಗದ ಫಲಾನುಭವಿಗಳಿಗೆ ವಾರ್ಷಿಕ ಆದಾಯ ಮಿತಿ 2,00,000/- ರೂ ಮತ್ತು ಸಾಮಾನ್ಯ ಮತ್ತು ವಿಶೇಷ ವರ್ಗದ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ವರ್ಷಕ್ಕೆ 1,50,000 ರೂ.ವಿಧವೆ ಮತ್ತು ಅಂಗವಿಕಲ ಮಹಿಳಾ ಫಲಾನುಭವಿಗೆ ವಾರ್ಷಿಕ ಆದಾಯ ಮಿತಿ ಇಲ್ಲ. ಹಾಗೂ 18 ರಿಂದ 55 ವರ್ಷ ವಯಸ್ಸಿನ ಮಹಿಳಾ ಫಲಾನುಭವಿಗಳು ಮಾತ್ರ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?;
* ಅರ್ಜಿದಾರರ ಆಧಾರ್ ಕಾರ್ಡ್
* ಜನನ ಪ್ರಮಾಣಪತ್ರ
* ವಿಳಾಸ ಮತ್ತು ಆದಾಯ ಪುರಾವೆ
* ಬಿಪಿಎಲ್ ಕಾರ್ಡ್ ಮತ್ತು ಪಡಿತರ ಚೀಟಿ. (ಬಡತನ ರೇಖೆಗಿಂತ ಕೆಳಗಿರುವವರಿಗೆ)
* ಜಾತಿ ಪ್ರಮಾಣ ಪತ್ರ. (ಅನ್ವಯವಾಗಿದ್ದರೆ)
* ಬ್ಯಾಂಕ್ ಖಾತೆ ವಿವರಗಳು.
* ಮೊಬೈಲ್ ಸಂಖ್ಯೆ.

ಮಹಿಳೆಯರು ಉದ್ಯೋಗಿನಿ ಯೋಜನೆಯಡಿ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಾಗಿ https://kswdc.karnataka.gov.in/21/udyogini/en ಲಿಂಕ್ ಗೆ ಕ್ಲಿಕ್ ಮಾಡಿ ಪರಿಶೀಲಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button