ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ 3,000 ಉದ್ಯೋಗಗಳ ಭರ್ತಿಗೆ ನೇಮಕಾತಿ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್ ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಕರ್ನಾಟಕದಲ್ಲಿ ಒಟ್ಟು 600 ಉದ್ಯೋಗಗಳಿದ್ದು ಅದರಲ್ಲಿ ಬೆಂಗಳೂರು ಅರ್ಬನ್ ನಲ್ಲಿ 92 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆ ತಿಳಿಸಿದೆ.
ಹುದ್ದೆಯ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು- 3,000
ವಯೋಮಿತಿ: 20 ರಿಂದ 28 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
ವಯೋಮಿತಿ ಸಡಿಲಿಕೆ
ಎಸ್ಎಸಿ, ಎಸ್ಟಿಗೆ 5 ವರ್ಷಗಳು ಸಡಿಲಿಕೆ
ಒಬಿಸಿ, ಜನರಲ್ 3 ವರ್ಷಗಳು
ವಿಶೇಷ ಚೇತನರಿಗೆ 10 ವರ್ಷಗಳು ಸಡಿಲಿಕೆ
ವಿದ್ಯಾರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ
ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ
ಟೆಸ್ಟ್ ನಡೆಸಲಾಗುತ್ತದೆ
ದಾಖಲೆ ಪರಿಶೀಲನೆ
ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್ ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇರಲ್ಲ
ಜನರಲ್, ಒಬಿಸಿ ಸೇರಿ ಎಲ್ಲರಿಗೂ- 500 ರೂಪಾಯಿಗಳು
ಆನ್ಲೈನ್ ಅರ್ಜಿ ಆರಂಭ- ಸೆಪ್ಟೆಂಬರ್ 21
ಅರ್ಜಿ ಹಾಕಲು ಕೊನೆ ದಿನ- ಅಕ್ಟೋಬರ್ 04
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಗಮನಿಸಿ- https://canarabank.com/UploadedFiles