ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಭಾಗ್ಯ ಯೋಜನೆ- ಸ್ಥಗಿತಗೊಂಡಿದ್ದ ಈ ಯೋಜನೆ ಪುನಾರಂಭ
(krishi yojana) ರಾಜ್ಯದಲ್ಲಿ ಹಿಂದಿನ ಸರ್ಕಾರ ಸ್ಮಗಿತಗೊಳಿಸಿದ್ದ ಕೃಷಿ ಭಾಗ್ಯ ಯೋಜನೆ ಪುನರಾರಂಭ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.
ಯೋಜನೆಯ ಲಾಭ ಪಡೆಯಲು ಆಸಕ್ತ ರೈತರು ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಕೃಷಿ ಭಾಗ್ಯ ಯೋಜನೆಯು ಕೇವಲ ಮಳೆಯಾಶ್ರಿತ ಪ್ರದೇಶಕ್ಕೆ ಸೀಮಿತವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕೃಷಿ ಭಾಗ್ಯಯೋಜನೆಯನ್ನು ಅಚ್ಚುಕಟ್ಟು ಪ್ರದೇಶಕಕ್ಕೂ ವಿಸ್ತರಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಭಾಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಕೊಳವೆ ಬಾವಿಯ ಬದಲಾಗಿ ಹೂಡಿಕೆಯನ್ನು ಕೃಷಿ ಭಾಗ್ಯ ಯೋಜನೆಯ ಘಟಕಗಳಲ್ಲಿ ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದು.
ರೈತರು ಕೆಂಪು ಮಣ್ಣಿನಲ್ಲಿ ಕಡ್ಡಾಯವಾಗಿ ಟಾರ್ಪಲ್ ಹೊದಿಕೆ ಹಾಗೂ ತಂತಿ ಬೇಲಿಯನ್ನು ಎಲ್ಲಾ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಕೃಷಿ ಹೊಂಡ ಮಾಡಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿ ಘಟಕಗಳಿಗೆ ಕೂಡ ಸಹಾಯಧನ ಲಭ್ಯವಿರುತ್ತದೆ. ಒಣ ಭೂಮಿ ರೈತರ ಆದಾಯ ಮಳೆಯ ಮೇಲೆ ಅವಲಂಬಿತವಾಗಿರುವುದರಿಂದ ನಿರೀಕ್ಷಿತ ಆದಾಯ ಸಿಗುವುದು ಕಷ್ಟಸಾಧ್ಯವಾಗಿದ್ದು, ರೈತರು ಕೃಷಿ ಭಾಗ್ಯಯೋಜನೆಯ ವಿವಿಧ ಘಟಕಗಳ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.