ಚಿಂಚೋಳಿಃ ಯಲಕಪಳ್ಳಿ ಗ್ರಾಮದಲ್ಲಿ ಶಾಂತಲಿಂಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ
ಕಲಬುರ್ಗಿಃಯಲಕಪಳ್ಳಿ ಗ್ರಾಮದಲ್ಲಿ ಶಾಂತಲಿಂಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ
ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ಶ್ರೀ ಅಮರೇಶ್ವರ ಮಠದಲ್ಲಿ ಶ್ರೀ ಶಾಂತಲಿಂಗೇಶ್ವರ ಶಿವಯೋಗಿಗಳ 40 ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಗದ್ದುಗೆಗೆ ತಳಿರು ತೋರಣ ಕಟ್ಟಿ ಅಲಂಕಾರ ಮಾಡಲಾಗಿತ್ತು. ಬಣಮಗಿ ರಾಚೋಟೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ರವಿವಾರ ಬೆಳಗ್ಗೆ ಶಾಂತಲಿಂಗೇಶ್ವರ ಗದ್ದುಗೆಗೆ ರುದ್ರಾಭೀಷಕ ಹಾಗೂ ಜಂಗಮ ಅರ್ಚನೆ ನಡೆಸಲಾಯಿತು. ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಗ್ರಾಮಸ್ಥರು, ಭಕ್ತರು ಆಗಮಿಸಿ ಶಿವಯೋಗಿಗಳ ಗದ್ದುಗೆ ದರ್ಶನ ಪಡೆದು ಕೃತಾರ್ಥರಾದರು.
ನಂತರ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸೇವಿಸಿದರು. ಈ ಸಂದರ್ಭದಲ್ಲಿ ಅಮರೇಶ್ವರ ಮಠದ ಶಂಭುಲಿಂಗಯ್ಯ ಸ್ವಾಮಿ, ಶಿವಲಿಂಗಯ್ಯ ಸ್ಥಾವರಮಠ, ಸಿದ್ದಲಿಂಗಪ್ಪ ಪಸಾರ, ಕಾಳಪ್ಪ ಪೊಲೀಸ ಪಾಟೀಲ, ಸಿದ್ದಾರೆಡ್ಡಿ ಬಟಿಗೇರಿ, ಬಸವರಾಜ ಪಸಾರ, ಮಲ್ಲಯ್ಯ ಕೇರಳ್ಳಿ, ವೈಜನಾಥರೆಡ್ಡಿ ಕುಪನೂರ, ಮಲ್ಲಿಕಾರ್ಜುನ ಮಾಲಿಪಾಟೀಲ, ವಿಜಯಕುಮಾರ ಮಾಲಿಪಾಟೀಲ, ಬಸವರಾಜ ನಾಗೂರ, ಸಂಜುಕುಮಾರ ಪಾಟೀಲ, ರವಿ ದುಬಾಸಿ, ಶಿವಕುಮಾರ ಪಾಟೀಲ, ಕಲ್ಲಯ್ಯ ಸ್ವಾಮಿ, ರೇವಣಸಿದ್ದಪ್ಪ ಪಾಟೀಲ, ಸುಭಾಷ್ ಪಾಟೀಲ ಸೇರಿದಂತೆ ಇತರರು ಇದ್ದರು.