ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ಶಿಪ್; ಇಲ್ಲಿದೆ ಸಂಪೂರ್ಣ ಮಾಹಿತಿ
![](https://vinayavani.com/wp-content/uploads/2024/07/download-15-4-780x470.jpg)
(IFSS Scholarship) 3 ವರ್ಷದ ಬಿ.ಎಸ್.ಸಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ಇನ್ಫೋಸಿಸ್ ಫೌಂಡೇಶನ್ ಸ್ಟೆಮ್ ಸ್ಟಾರ್ಸ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಟೆಮ್ ಕೋರ್ಸ್ಗಳು ( ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್), ಮೆಡಿಕಲ್ ಸೈನ್ಸಸ್ (ಎಂಬಿಬಿಎಸ್), ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್), ಬ್ಯಾಚುಲರ್ ಆಫ್ ಫಾರ್ಮಸಿ (ಬಿ.ಫಾರ್ಮ್) ಯಲ್ಲಿ ಪದವಿಪೂರ್ವ ಪದವಿಗಳನ್ನು ಪಡೆಯಲು ಬಯಸುವ ಭಾರತದಲ್ಲಿನ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಇನ್ಫೋಸಿಸ್ ಫೌಂಡೇಶನ್ನ ಉಪಕ್ರಮವಾಗಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
• ಅರ್ಜಿದಾರರು ಭಾರತದ ಪ್ರಜೆಗಳಾಗಿರುವ ವಿದ್ಯಾರ್ಥಿನಿಗಳಾಗಿರಬೇಕು.
• ವಿದ್ಯಾರ್ಥಿಗಳು ಇವುಗಳಿಗೆ ದಾಖಲಾತಿ ಹೊಂದಿರಬೇಕು
o 3 ವರ್ಷದ ಬಿ.ಎಸ್.ಸಿ ಪದವಿಯ ಮೊದಲ ವರ್ಷ (ಬಯೋ ಕೆಮಿಸ್ಟ್ರಿ, ಫಿಸಿಕ್ಸ್, ಕೆಮಿಸ್ಟ್ರಿ, ನರ್ಸಿಂಗ್, ಜಿಯೋಗ್ರಫಿ, ಐಟಿ, ಬಯಾಲಜಿ, ಕಂಪ್ಯೂಟರ್ ಸೈನ್ಸ್, ಫೊರೆನ್ಸಿಕ್ ಸೈನ್ಸ್ ಇತ್ಯಾದಿ)
o ಮೊದಲ ಅಥವಾ 2 ನೇ ವರ್ಷದ ಬಿ.ಟೆಕ್, ಎಂಬಿಬಿಎಸ್, ಬಿ.ಫಾರ್ಮ್, ಬಿಡಿಎಸ್, ಇಂಟಿಗ್ರೇಟೆಡ್ ಮಾಸ್ಟರ್ಸ್, ಡ್ಯುಯಲ್ ಡಿಗ್ರಿ (ಬಿ.ಟೆಕ್ + ಎಂ.ಟೆಕ್).
• ವಿದ್ಯಾರ್ಥಿಗಳು 2023 ಅಥವಾ 2024ರ ವರ್ಷಕ್ಕಾಗಿ ಎನ್.ಐ.ಆರ್.ಎಫ್ (ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ವರ್ಕ್)ನಲ್ಲಿ ಉನ್ನತ ಶ್ರೇಣಿಗಳಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳಿಗೆ ದಾಖಲಾಗಿರಬೇಕು.
• ಅಭ್ಯರ್ಥಿಗಳು ಗುರುತಿಸಲ್ಪಟ್ಟ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆದಿರಬೇಕು ಮತ್ತು ತಮ್ಮ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮನಾಗಿರಬೇಕು.
•ಅಭ್ಯರ್ಥಿಗಳು ಇವೇ ವೆಚ್ಚಗಳಿಗಾಗಿ ಇತರ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿರಬಾರದು.
ಎಷ್ಟು ಸ್ಕಾಲರ್ ಶಿಪ್ ಲಭ್ಯ?;
ಆಯ್ಕೆಯಾದ ಅಭ್ಯರ್ಥಿಗಳು ಬೋಧನೆ, ಜೀವನ ನಿರ್ವಹಣಾ ವೆಚ್ಚಗಳು ಮತ್ತು ಅಧಯನ ಸಾಮಗ್ರಿಗಳನ್ನು ಒಳಗೊಂಡಂತೆ, ತಾವು ಪಾವತಿಸಿರುವ ರಸೀದಿಗೆ ತಕ್ಕಂತೆ ವಾರ್ಷಿಕ ರೂ.1 ಲಕ್ಷದ ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/ISTS2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
30-09-2024