ಪ್ರಮುಖ ಸುದ್ದಿ
ಕಾರು ಚಾಲಕನಿಗೆ ‘ನೋ ಹೆಲ್ಮೆಟ್’ ದಂಡ!
ಇದು ಟ್ರಾಫಿಕ್ ಪೊಲೀಸರ ಎಡವಟ್ಟು…!
ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಬಳಿ ಓಲಾ ಕ್ಯಾಬ್ ಚಾಲಕನಿಗೆ ತಡೆದು ಹೆಲ್ಮೇಟ್ ಧರಿಸಿಲ್ಲ ಎಂದು ಪೊಲೀಸರು ನೋಟಿಸ್ ನೀಡಿದ ಘಟನೆ ನಡೆದಿದೆ. ಓಲಾ ಕ್ಯಾಬ್ ಕೆಎ 22, ಡಿ 2271 ಸಂಖ್ಯೆಯ ಕಾರನ್ನು ಚಲಿಸುತ್ತಿದ್ದ ಚಾಲಕ ರವಿ ಕುಂಬ್ಳೆಯನ್ನು ತಡೆದ ಉತ್ತರ ಸಂಚಾರಿ ಠಾಣೆಯ ಪೊಲೀಸರು ಹೆಲ್ಮೆಟ್ ದಂಡದ ನೋಟೀಸ್ ನೀಡುವ ಮೂಲಕ ಎಡವಟ್ಟು ಮಾಡಿದ್ದಾರೆ ಎಂದು ಕಾರು ಚಾಲಕರು ಆರೋಪಿಸಿದ್ದಾರೆ.
ಆ ಮೂಲಕ ಸಂಚಾರಿ ಪೊಲೀಸರ ಬುದ್ಧಿಮತ್ತೆ ಬಗ್ಗೆ ಕಾರು ಚಾಲಕರು ನಗಾಡುವಂತ ಸ್ಥಿತಿಯನ್ನು ಪೊಲೀಸರು ತಂದು ಕೊಂಡಿದ್ದಾರೆ. ಇನ್ನು ಈ ಬಗ್ಗೆ ಓಲಾ ಕ್ಯಾಬ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದ್ದು ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದೆ.