‘ಶಹಾಪುರ ಮಾರ್ಟ್’ ಕಳ್ಳತನ 22 ಲಕ್ಷ ಮೌಲ್ಯದ ಸಾಮಾಗ್ರಿ ಕಳುವು
ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕದ್ದೊಯ್ದ ಖದೀಮರು
‘ಶಹಾಪುರ ಮಾರ್ಟ್’ ಕಳ್ಳತನ 22 ಲಕ್ಷ ಮೌಲ್ಯದ ಸಾಮಾಗ್ರಿ ಕಳುವು‘
ನಗದು 45,000 ರೂ. ಸೇರಿದ ಡ್ರೈಫ್ರೂಟ್ಸ್ ಕಳುವು
ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕದ್ದೊಯ್ದ ಖದೀಮರು
yadgiri, ಶಹಾಪುರಃ ನಗರದ ಬೀದರ-ಬೆಂಗಳೂರ ಹೆದ್ದಾರಿಯಲ್ಲಿ ಸುಬೇದಾರ ಆಸ್ಪತ್ರೆ ಬಳಿ ಇರುವ ‘ಶಹಾಪುರ ಮಾರ್ಟ್’ ಬಜಾರ್ ಮಾಲ್ ಮಂಗಳವಾರ ರಾತ್ರಿ ಕಳ್ಳರು ಮಾರ್ಟ್‍ನ ಮೇಲಿನ ಚತ್ ಮುರಿದು ಒಳಗಡೆ ನುಗ್ಗಿ ಗಲ್ಲಾ ಪೆಟ್ಟಿಗೆಯಲ್ಲಿರುವ ನಗರದು ನಲವತೈದು ಸಾವಿರ ಸೇರಿದಂತೆ ಅಂಗಡಿಯೊಳಗಿನ ಡ್ರೈಫ್ರೂಟ್ಸ್ ಸಾಮಾಗ್ರಿಗಳು ಸೇರಿದಂತೆ ಅಂದಾಜು 22 ಲಕ್ಷ ಮೌಲ್ಯದ ಸಾಮಾಗ್ರಿಗಳ ಸಮೇತ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ಹೊತ್ತೊಯ್ದ ಘಟನೆ ನಗರದಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಎಂದಿನಂತೆ ಶಹಾಪುರ ಮಾರ್ಟ್ ಮಾಲೀಕರು ಅಂಗಡಿ ತೆಗೆಯಲು ಹೋದಾಗ ಕಳುವು ನಡೆದಿರುವದು ಬೆಳಕಿಗೆ ಬಂದಿದೆ. ಮಾರ್ಟ್‍ನ ಮೇಲಗಡೆ ಚತ್ ಶೆಡ್ ಕೊರೆದು ಅಂಗಡಿಯೊಳಗೆ ಇಳಿದ ಖದೀಮರು ಗಲ್ಲಾ ಪೆಟಿಗೆಯಲ್ಲಿದ್ದ ನಲವತ್ತೈದು ಸಾವಿರ ರೂ. ಸೇರಿದಂತೆ ದರ ಹೆಚ್ಚಿಗೆ ಇದ್ದ ಡ್ರೈಫ್ರೂಟ್ಸ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆಂದು ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರುವದಿಲ್ಲ.
ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು – ಮಾಲೀಕರ ಆರೋಪ
ಬುಧವಾರ ಎಂದಿನಂತೆ ಬೆಳಗ್ಗೆ 10 ಗಂಟೆಗೆ ಅಂಗಡಿ ತೆರೆಯಲಾಗಿದ್ದು, ಒಳಗಡೆ ಚತ್ ಕೊರೆದಿರುವದು ಕಂಡು ಬಂದಿತು ತಕ್ಷಣ ಸುತ್ತಮುತ್ತಲಿನ ಎಲ್ಲರಿಗೂ ವಿಚಾರಿಸಲಾಗಿ ಯಾರೊಬ್ಬರಿಗೂ ಕಳುವಾದ ಬಗ್ಗೆ ಮಾಹಿತಿ ಸಿಗಲಿಲ್ಲ. ತಕ್ಷಣ ಗಲ್ಲಾ ಪೆಟ್ಟಿಗೆ ನೋಡಿದೆ ಅದರಲ್ಲಿದ್ದ ಅಂದಾಜು ನಲವತ್ತೈದು ಸಾವಿರ ರೂಪಾಯಿ ಸೇರಿದಂತೆ ಡ್ರೈಫ್ರೂಟ್ಸ್ ಇತರೆ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಸಮೇತ ಕಳ್ಳರು ಹೊತ್ತೊಯ್ದಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿರುವೆ, ಅಲ್ಲದೆ ದೂರು ಸಹ ಸಲ್ಲಿಸಿರುವೆ. ಆದರೆ ಪರಿಶೀಲನೆ ಮಾಡುತ್ತೇವೆ ಎಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ತಯಾರಿಲ್ಲ.
-ಮಹ್ಮದ್ ಇಲಿಯಾಸ್ ಹುಸೇನ್ ದಾದುಲ್ಲಾ. ‘ಶಹಾಪುರ ಮಾರ್ಟ್’ ಮಾಲೀಕ.