ಲೋಕಾ ವಿಚಾರಣೆಗೆ ಸಿಎಂ ಹಾಜರು, ರಾಜ್ಯಕ್ಕೆ ಘನತೆ ತರುವಂತದ್ದಲ್ಲ – ಛಲವಾದಿ
ಸಿಎಂ ಕಂಡು ಲೋಕಾ ಅಧಿಕಾರಿಗಳಿಗೆ ಭಯ ವಿಚಾರಣೆ ಸುಲಭನಾ.?
ಲೋಕಾ ವಿಚಾರಣೆಗೆ ಸಿಎಂ ಹಾಜರು, ರಾಜ್ಯಕ್ಕೆ ಘನತೆ ತರುವಂತದ್ದಲ್ಲ – ಛಲವಾದಿ
ಸಿಎಂ ಕಂಡು ಲೋಕಾ ಅಧಿಕಾರಿಗಳಿಗೆ ಭಯ ವಿಚಾರಣೆ ಸುಲಭನಾ.?
ವಿವಿ ಡೆಸ್ಕ್ಃ ಸಿಎಂ ಸಿದ್ರಾಮಯ್ಯ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಮೂಲಕ ರಾಜ್ಯ ಘನತೆ ಕಳೆದಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ರಾಜ್ಯದಲ್ಕಿಯೇ ಸಿಎಂ ಅಧಿಕಾರದಲ್ಲಿದ್ದುಕೊಂಡೆ ತಮ್ಮ ಮೇಲಿನ ಆರೋಪವನ್ನು ಎದುರಿಸುತ್ತಿರುವದು ಆ ಸ್ಥಾನಕ್ಕೆ ಅವರಿಗೂ ಶೋಭೆ ತರುವಂತದ್ದಲ್ಲ ಎಂದ ಅವರು, ತಮ್ಮ ಮೇಲಿನ ಆರೋಪವನ್ನು ಅಧಿಕಾರದಲ್ಲಿದ್ದುಕೊಂಡೆ ಎದುರಿಸುವದು ಎಷ್ಟೊಂದು ಸಮಂಜಸ.
ಅಲ್ಲದೆ ಅವರ ಟಿಪಿ ಪ್ರತಿ ನೋಡಿದರೆ ಗೊತ್ತಾಗುತ್ತೆ ಅವರು ಪೂರ್ವಯೋಜಿತ ವಿಚಾರಣೆಗೆ ಹಾಜರಾಗುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆಎ. ಲೋಕಾ ಅಧಿಕಾರಿಗಳು ಎರಡು ತಾಸು ಮಾತ್ರ ಪ್ರಶ್ನೆ ಮಾಡ್ತಾರೆ ಎಂದು ಹೇಗೆ ಅವರು ಅನ್ಕೋತಾರೆ. ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರು, 12 ಗಂಟೆಗೆ ಚನ್ನಪಟ್ಟಣ ಪ್ರಚಾರಕ್ಕೆ ತೆರಳಲಿದ್ದಾರೆಂದು ಟಿಪಿ ಯಲ್ಲಿ ಪ್ರಕಟಿಸುವ ಅವರು, ಲೋಕಾ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆಯಾಗಿ ಮಾತಾಡಿಕೊಂಡಿದ್ದಾರಾ.? ಪರಸ್ಪರರ ನಡುವೆ ಏನಾದರೂ ನಡೆದಿದೆಯಾ.? ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಮುಡಾ ಪ್ರಕರಣವನ್ನು ಸಿಬಿಐ ಗೆ ವಹಿಸಿದಾಗ ಮಾತ್ರ ಸತ್ಯ ಬಯಲಾಗಲಿದೆ. ಮೊದಲು ಸಿಎಂ ಅಧಿಕಾರದಿಂದ ಕೆಳಗಿಳಿದು ಲೋಕಾ ವಿಚಾರಣೆಗೆ ಹಾಜರಾಗಲಿ ಎಂದು ಕಿಡಿಕಾರಿದರು.
ಅಂದಂತೆ ಲೋಕಾ ವಿಚಾರಣೆ 12 ಗಂಟೆಗೆ ಮುಗಿದಿದ್ದು, ಇದೀಗ ಸಿಎಂ ಲೋಕಾ ಅಧಿಕಾರಿಗಳ ವಿಚಾರಣೆ ಮುಗಿಸಿಕೊಂಡು ಹೊರಟಿದ್ದಾರೆ.