ಪ್ರಗತಿಪರ ಪತ್ರಕರ್ತ ಟಿ. ನಾಗೇಂದ್ರ ಅವರಿಗೆ ದತ್ತಿ ಪ್ರಶಸ್ತಿ – ಶಹಾಪುರ ಕಾನಿಪ ಸಂಘ ಹರ್ಷ
ಶಹಾಪುರ ಕಾನಿಪಾ ಸಂಘದಿಂದ ಹರ್ಷ, ಅಭಿನಂದನೆಗಳು

ಪ್ರಗತಿಪರ ಪತ್ರಕರ್ತ ಟಿ. ನಾಗೇಂದ್ರ ಅವರಿಗೆ ದತ್ತಿ ಪ್ರಶಸ್ತಿ – ಶಹಾಪುರ ಕಾನಿಪ ಸಂಘ ಹರ್ಷ
ಶಹಾಪುರಃ ನಗರದ ಹಿರಿಯ, ಪ್ರಗತಿಪರ ಪತ್ರಕರ್ತರಾದ ಟಿ. ನಾಗೇಂದ್ರ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ದತ್ತಿ ಪ್ರಶಸ್ತಿಗೆ ಬಾಜನರಾಗಿರುವುದು ಹೆಮ್ಮೆಯ ಸಂಗತಿ.
ಕಳೆದ 3 ದಶಕಗಳಿಂದ ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಬದ್ದತೆ, ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಟಿ. ನಾಗೇಂದ್ರ ಅವರು ವಸ್ತು ನಿಷ್ಠ,ವಾದ, ನ್ಯಾಯಪರವಾರ ವರದಿಗಳಿಂದ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದವರು.
ಸಗರನಾಡಿನ ಕಲೆ, ಸಾಹಿತ್ಯ, ಪರಂಪರೆ ಸೇರಿದಂತೆ ಹಲವಾರು ಸಮಸ್ಯೆಗಳ ಮೇಲೆ ಲೇಖನಿ ಮೂಲಕ ಬೆಳಕು ಚಲ್ಲಿದವರು. ಸಾಂಸ್ಕೃತಿಕ ಲೋಕವನ್ನು ಸದಾ ಎಚ್ಚರವಾಗಿಟ್ಟವರು. ಸರಳ, ನೇರ ನಿಷ್ಠುರತೆಯ ಟಿ.ನಾಗೇಂದ್ರ ಅವರಿಗೆ ದತ್ತಿ ಪ್ರಶಸ್ತಿ ಲಭಿಸಿರುವದಕ್ಕೆ ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷರು ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.
– ರಾಘವೇಂದ್ರ ಹಾರಣಗೇರಾ.
ವಿವಾ ಲೇಖಕರು, ವರದಿಗಾರರು ಶಹಾಪುರ.