ಮಕ್ಕಳ ಸ್ಮರಣ ಶಕ್ತಿ ಹೆಚ್ಚಾಗಬೇಕೆ.? ಹಾಗಾದರೆ ಈ ಮನೆ ಮದ್ದು ಬಳಸಿ
ವೀಳೆದೆಲೆಯಲಿ ಅಡಗಿದೆ ಅದ್ಭುತ ಶಕ್ತಿಃ ಹೇಗೆ ಬಳಕೆ ಮಾಡಬೇಕು ಗೊತ್ತೆ..?

ಮಕ್ಕಳ ಸ್ಮರಣ ಶಕ್ತಿ ಹೆಚ್ಚಾಗಬೇಕೆ.? ಹಾಗಾದರೆ ಈ ಮನೆ ಮದ್ದು ಬಳಸಿ
ವೀಳೆದೆಲೆಯಲಿ ಅಡಗಿದೆ ಅದ್ಭುತ ಶಕ್ತಿಃ ಹೇಗೆ ಬಳಕೆ ಮಾಡಬೇಕು ಗೊತ್ತೆ..?
ಮಲ್ಲಿಕಾರ್ಜುನ ಮುದ್ನೂರ
ವಿವಿ ಡೆಸ್ಕ್ಃ ಹಿಂದೆ ಅಜ್ಜಿಯಂದಿರು ಮನೆಯಲ್ಲಿಯೇ ಮನೆ ಮದ್ದೊಂದು ಸಿದ್ಧ ಮಾಡಿ ಮನೆಯ ಮೊಮ್ಮಕಳ ಬುದ್ಧ ಶಕ್ತಿ ಹೆಚ್ಚಿಸಲು ನೀಡುತ್ತಿದ್ದರು.
ಇದು ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ಮಕ್ಕಳ ಸ್ಮರಣ ಶಕ್ತಿ ವೃದ್ಧಿಗೆ ಈ ಮನೆ ಮದ್ದು ಸಹಾಯ ಮಾಡುತ್ತದೆ.
ಮೆದುಳಿ ಆರೋಗ್ಯಕರವಾಗಿರದಿದ್ದರೆ ನಮ್ಮ ಯಾವ ಕೆಲಸಗಳು ಸುಲಲಿತವಾಗಿ ನಡೆಯುವದಿಲ್ಲ. ಅಲ್ಲದೆ ಸ್ಮರಣ ಶಕ್ತಿ ಕಡಿಮೆಯಾಗಲಿದೆ.

ಅಜ್ಜಿಯ ಮನೆ ಮದ್ದಿನಿಂದ ಮನೆಯಲ್ಲಿ ಮಾಡುವ ಈ ಸಣ್ಣಮದ್ದಿನಿಂದ ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಬಹುದು.
ವೀಳ್ಯೇದ ಎಲೆ ಮಹಿಮೆ
ಸಾಮಾನ್ಯವಾಗಿ ವೀಳ್ಯೇದ ಎಲೆಗಳ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಪ್ರತಿ ಮನೆಯಲ್ಲಿ ವೀಳ್ಯೇದ ಎಲೆ ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡುತ್ತಿರುತ್ತಾರೆ.
ಆದರೆ ಸ್ಮರಣಾ ಶಕ್ತಿ ಹೆಚ್ಚಿಸಲು ಯಾವ ಕಾಂಬಿನೇಷನ್ ದೊಂದಿಗೆ ಉಪಯೋಗಿಸಬೇಕೆಂಬುದು ಬಹಳಷ್ಟು ಜನರಿಗೆ ತಿಳಿದಿರುವದಿಲ್ಲ. ಯಾರ ಮನೆಯಲ್ಲಿ ವಯಸ್ಸಾದ ಅಜ್ಜ ಅಜ್ಜಿಯಂದಿರು ಇರುತ್ತಾರೋ ಅದು ಗ್ರಾಮೀಣ ಭಾಗದವರಿಗೆ ಈ ವೀಳ್ಯೆದೆಲೆ ಮಯ ಜೇನು ತುಪ್ಪದ ಬಗ್ಗೆ ಗೊತ್ತಿರುತ್ತದೆ.
ವೀಳ್ಯದೆಲೆ ಯನ್ನು ಜೇನುತುಪ್ಪದಲಿ ಎದ್ದಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಮಕ್ಕಳಿಗೆ ಕೊಡುತ್ತಾ ಬನ್ನಿ.
ಆಗ ನೋಡಿ ಇದರ ಚಮತ್ಕಾರ, ಈ ಮದ್ದು ನರಮಂಡಲದಲ್ಲಿರುವ ದೌರ್ಬಲ್ಯಗಳನ್ನು ಕಡಿಮೆ ಮಾಡಿ ಮೆದುಳು ಸಕ್ರಿಯಗಿಸುವದಲ್ಲದೆ ಸ್ಮರಣ ಶಕ್ತಿ ಹೆಚ್ಚಾಗಲು ತುಂಬಾ ಸಹಾಯಕವಾಗಿದೆ. ಮಕ್ಕಳ ಬುದ್ಧಿ ಶಕ್ತಿ ಚುರುಕಾಗಲಿದೆ. ಓದಿನಲ್ಲಿ ಅಭ್ಯಾಸದಲ್ಲಿ ಶೀಘ್ರ ಪಾಠ ಕ್ಯಾಚ್ ಮಾಡಿಕೊಳ್ಳಲಿದ್ದಾರೆ. ಈ ಕುರಿತು ಸಂಬಂಧಿಸಿದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಆ ಮೇಲೆ ಮನೆ ಮದ್ದು ಬಳಸಿ ಎಂದು ಸಲಹೆ ನೀಡಲಿಚ್ಛಿಸುತ್ತೇನೆ.