
ಜು.೨೧ ರಂದು ಬೃಹತ್ ಆರೋಗ್ಯ ಮೇಳ
ಸರ್ಕಾರಿ ಮಹಿಳಾ ನೌಕರರ ಸಂಘದಿಂದ ಆಯೋಜನೆ | ಹಲವು ಗಂಭೀರ ರೋಗಗಳ ಉಚಿತ ತಪಾಸಣೆ | ವಿವಿಧ ಇಲಾಖೆ, ಸಂಘ ಸಹಯೋಗ
ವಿನಯವಾಣಿ ಸುದ್ದಿ
Yadgiri, ಶಹಾಪುರಃ ಕೂಲಿ ಕರ‍್ಮಿಕ ರ‍್ಗ ಹಾಗೂ ಬಡಜನರ ಹಿತಕ್ಕಾಗಿ ವಿವಿಧ ಗಂಭೀರ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯ ಬೃಹತ್ ಶಿಬಿರವು ಆಯೋಜಿಸಿದ್ದು ಇದರ ಸದುಪಯೋಗ ಗ್ರಾಮ ಮತ್ತು ಸುತ್ತಮುತ್ತಲಿನ ಜನರು ಸದುಪಯೋಗ ಮಾಡಿಕೊಳ್ಳಿ ಎಂದು ರ‍್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಗೂಗಲ್ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ಆರೋಗ್ಯ ಮೇಳ ಅಂಗವಾಗಿ ನಡೆದ ಪರ‍್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲಾ ರ‍್ಕಾರಿ ಮಹಿಳಾ ನೌಕರರ ಸಂಘ ಇತ್ತೀಚೆಗೆ ಸ್ಥಾಪನೆಯಾಗಿದ್ದು, ಸಂಘದಡಿ ಜನೋಪÀಯೋಗಿ ಕರ‍್ಯ ಮಾಡುವ ಉದ್ದೇಶದಿಂದ ಮೊದಲ ಕರ‍್ಯ ಆರಂಭಿಸಿದ್ದೇವೆ. ದೋರನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮದ ಜನರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ಮಹಿಳೆಯರು ಎದುರಿಸುವ ಗಂಭೀರವಾದ ರ‍್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರ‍್ಭಕೋಶದ ಇತರೆ ಸಮಸ್ಯೆಗಳು ಉಳಿದಂತೆ ಸಾಮನ್ಯವಾಗಿ ಬಾಯಿ ಕ್ಯಾನ್ಸರ್, ದೃಷ್ಟಿ ಹೀನತೆ, ದಂತ ಸಮಸ್ಯೆ, ಬಿಪಿ, ಶುಗರ್ ಜೊತೆ ಜನಸಂಖ್ಯಾ ನಿಯಂತ್ರಣದ ತಪಾಸಣೆ ಜೊತೆ ಚಿಕಿತ್ಸೆಗಳ ಸಂಪರ‍್ಣ ಮಾಹಿತಿ ವಿವಿರ ನೀಡಲಾಗುತ್ತದೆ.
ಈ ಆರೋಗ್ಯ ಶಿಬಿರಕ್ಕೆ ಇಂಡಿಯನ್ ಕ್ಯಾನ್ಸರ್ ಸೂಸೈಟಿ ಕಲಬರ‍್ಗಿ ವಿಭಾಗ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ ದೋರನಹಳ್ಳಿ, ರ‍್ಕಾರಿ ಪ್ರೌಢಶಾಲೆ ಹಳೆ ವಿದ್ಯರ‍್ಥಿಗಳ ಸಂಘ, ಸಹಕಾರ ನೀಡುತ್ತಿವೆ. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಕಲಬರ‍್ಗಿಯ ಕಿದ್ವಾಯಿಯಿಂದ ಅಗತ್ಯ ಸಲಕರಣೆ ಹಾಗೂ ಸಿಬ್ಬಂದಿಗಳು ಬರಲಿದ್ದಾರೆ. ಸ್ತ್ರೀ ರೋಗ ತಜ್ಞೆ ಡಾ.ನೀಲಾಂಬಿಕ, ರ‍್ಭಕೋಶ ತಜ್ಞೆ ಡಾ.ರಾಜೇಶ್ವರಿ ಗುತ್ತೇದಾರ, ಶಸ್ತ್ರ ಚಿಕಿತ್ಸಕ ಹಾಗೂ ಜಿಲ್ಲಾ ರ‍್ವೇಕ್ಷಣಾ ಅಧಿಕಾರಿ ಡಾ.ಮಲ್ಲನಗೌಡ ಪಾಟೀಲ್, ಜನಸಂಖ್ಯಾ ನಿಯಂತ್ರಣ ತಜ್ಞೆ ಡಾ.ಜ್ಯೋತಿ ಕಟ್ಟಿಮನಿ, ಹೃದಯ ತಜ್ಞ ಡಾ.ಅರುಣ್ ಸಿದ್ರಿ ಸೇರಿದಂತೆ ಹಲವಾರು ತಜ್ಞ ವೈದ್ಯರು ಶಿಬಿರದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ.
ಇದಲ್ಲದೆ ಕರ‍್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಪಂಚಾಯತ ರಾಜ್ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಪತ್ರರ‍್ತರ ಸಂಘ, ಹಳೆ ವಿದ್ಯರ‍್ಥಿಗಳ ಸಂಘದ ವಿವಿಧ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂರ‍್ಭ ಸಭೆಯಲ್ಲಿ ಸಿಎಚ್‌ಸಿ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ, ಸ.ಪ್ರೌ.ಹ.ವಿ ಸಂಘದ ಸದಸ್ಯರಾದ ಹಯ್ಯಾಳಪ್ಪ ಗುಂಟನೂರ, ಅಮರೀಶ ಗೋಲಗೇರಿ, ಮಂಜುನಾಥ ಕಂಚಗಾರ, ವಿಶಾಲಕುಮಾರ ಶಿಂಧೆ, ದೇವೆಂದ್ರ ಮಲಗೊಂಡ, ಮಹೇಶ ಪತ್ತಾರ ಇದ್ದರು.