
ಶೋಷಿತ ವರ್ಗಗಳ ಐಕ್ಯತಾ ಸಮಾವೇಶ
yadgiri, ಶಹಾಪುರಃ ತಾರತಮ್ಯ, ಅಸಮಾನತೆಯ ಸಮಾಜದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಅಸಮಾನತೆ ಹೋಗಲಾಡಿಸಲು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಗ್ಗಟ್ಟಾಗಿ ನಡೆಯಬೇಕಿದೆ. ಶೋಷತರಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ತಿಳಿಸಿದರು.
ತಾಲೂಕಿನ ಆರಬೋಳ ಕಲ್ಯಾಣ ಮಂಟಪದಲ್ಲಿ ರವಿವಾರ ದಲಿತ ಸಂಘಟನೆಗಳ ಒಕ್ಕೂಟ ಮತತು ಇತರೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಲೇ ಇವೆ. ಹೀಗಾಗಿ ಸಂವಿಧಾನದ ರಕ್ಷಣೆ ಅಗತ್ಯವಿದೆ. ನಾವು ಸಂವಿಧಾನವನ್ನು ರಕ್ಷಿಸಿದಲ್ಲಿ ಸಂವಿಧಾನ ನಮ್ಮನ್ನು ರಕ್ಷಿಸಲಿದೆ. ಹಿಂದೆ ರಾಜರೆಲ್ಲರೂ ಅರಮನೆಯಲ್ಲಿ ಜನಿಸುತ್ತಿದ್ದರೂ, ಆದರೆ ಸಂವಿಧಾನ ಜಾರಿ ಆದ ಮೇಲೆ ರಾಜರೂ ಮತದಾನ, ಮತದಾನದ ಪೆಟ್ಟಿಗೆ ಮೂಲಕ ಜನ್ಮಿಸಲಿದ್ದಾರೆಂದು ಬಾಬಾ ಸಾಹೇಬರು ಅಂದೇ ಹೇಳಿದ್ದರು. ಅದನ್ನು ಅರ್ಥೈಸಿಕೊಂಡು ಎಲ್ಲರೂ ಮತದಾನದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶೋಷಿತರೆಲ್ಲರೂ ಒಗ್ಗಟ್ಟಾಗಿ ಸಂವಿಧಾನ ನೀಡಿದ ಹಕ್ಕಿನನ್ವಯ ನಾವೆಲ್ಲ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಸರ್ಕಾರ ಕೊಡಮಾಡಿದ ಹಲವಾರು ಯೋಜನೆಗಳ ಮೂಲಕ ನಾವೆಲ್ಲ ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರ ಸಮ ಚಿತ್ತದಿಂದ ಸಮ ಸಮಾಜ ಕಟ್ಟುವಲ್ಲಿ ಶ್ರಮವಹಿಸಬೇಕು.
ಇಂತಹ ಕಾರ್ಯಕ್ರಮಗಳ ಮೂಲಕ ರಾಜಕೀಯದಲ್ಲಿ ಹೊಸ ಪ್ರಯೋಗ ನಡೆಯಲಿದೆ. ಹೊಸ ಪೀಳಿಗೆ ರಾಜಕೀಯವಾಗಿ ಸಮಾಜ ಸೇವೆಯಲ್ಲಿ ಬರಬೇಕಿದೆ. ಹೊಸ ಮುಖಂಡತ್ವಕ್ಕೆ ಸಮಾವೇಶ ನಾಂದಿಯಾಗಲಿ. ಈ ಸಮಾವೇಶದ ಮಾದರಿ ಚಾಮರಾಜ ನಗರದವರೆಗೆ ತಲುಪಲಿ ಎಂದರು.
ಉರಿಲಿಂಗ ಪೆದ್ದಿ ಮಹಾ ಸಂಸ್ಥಾನದ ಜ್ಞಾನಪ್ರಕಾಶ ಮಹಾಸ್ವಾಮೀಜಿ, ಗುಲ್ಬರ್ಗಾದ ಖ್ವಾಜಾ ಬಂದೇನವಾಜ್ ದರ್ಗಾದ ಹಫೀಜ್ ಸಯ್ಯದ್ ಮಹ್ಮದ್ ಅಲಿ ಹಾಗು ಗೋಗಿಯ ಚಂದಾಹುಸೇನಿ ದರ್ಗಾದ ಹಜರತ್ ಸಯ್ಯದ್ ಶಹಾ ಇಸ್ಮಾಯಿಲ್ ಹುಸೇನಿ ಸಾನ್ನಿಧ್ಯವಹಿಸಿದ್ದರು. ಸ್ಥಳೀಯ ಶಾಸಕ, ಜಿಲ್ಲಾ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿಕೇತ್ರಾಜ್ ಮೌರ್ಯ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಧ್ಯಕ್ಷ ಕೆ.ಎಂ.ರಾಮಚAದ್ರಪ್ಪ, ಅಹಿಂದ ನೂತನ ಜಿಲ್ಲಾಧ್ಯಕ್ಷ ಹನುಮೆಗೌಡ ಮರಕಲ್ ಮಾತನಾಡಿದರು. ದಸಂಸ ರಾಜ್ಯಧ್ಯಕ್ಷ ಡಿ.ಜಿ.ಸಾಗರ ಅಧ್ಯಕ್ಷತೆವಹಿಸಿದ್ದರು.
ಸ್ಥಳೀಯ ಮುಖಂಡರಾ ತಿಮ್ಮಯ್ಯ ಪರ್ಲೆ, ಡಾ.ಭೀಮಣ್ಣ ಮೇಟಿ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಶರಣಪ್ಪ ಸಲಾದಪುರ, ಆರ್.ಚನ್ನಬಸು ವಕೀಲರು, ನಾಗಣ್ಣ ಬಡಿಗೇರ, ಶಿವಮಹಾಂತ ಚಂದಾಪುರ, ಮರೆಪ್ಪ ಪ್ಯಾಟಿ, ಇಬ್ರಾಹಿಂಸಾಬ ಶಿರವಾಳ, ಮಹಾದೇವಪ್ಪ ಸಾಲಿಮನಿ, ಹೊನ್ನಪ್ಪ ಗಂಗನಾಳ, ಶಿವಕುಮಾರ ತಳವಾರ, ಶರಣು ದೋರನಹಳ್ಳಿ, ಮರೆಪ್ಪ ಕನ್ಯಾಕೋಳೂರ ಇದ್ದರು. ಮುಖಂಡ ಶ್ರೀಶೈಲ್ ಹೊಸಮನಿ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಂಚಿತವಾಗಿ ವಾಲ್ಮೀಕಿ ವೃತ್ತದಿಂದ ಬಹಿರಂಗ ಸಭೆವರೆಗೆ ಸ್ವಾಮೀಜಿಗಳನ್ನು ಸಾರೋಟದೊಂದಿಗೆ ಬೈಕ್ ರ್ಯಾಲಿ ಜರುಗಿತು.