Home

ಮಗನನ್ನೇ ಪೂಜಿಸಿದ ಶಿವ

ತಾನೇ ರೂಪಿಸಿದ್ಧ ನಿಯಮ ಉಲ್ಲಂಘಿಸಿ ಸೋಲನುಭವಿಸಿದ್ದ ಶಿವ

ದಿನಕ್ಕೊಂದು ಕಥೆ

ಮಗನನ್ನೇ ಪೂಜಿಸಿದ ಶಿವ

ನ್ನ ಮನದಿಂದ ಗಣೇಶ ಉದಿಸಿದ. ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದರಿಂದ ಫಲದೊರಕದು.

ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ. ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದು, ಮಗನನ್ನು ಪೂಜಿಸಿ ಯುದ್ದಕ್ಕೆ ಹೊರಟ. ನಂತರ ತ್ರಿಪುರಾಂತಕನನ್ನು ಸೋಲಿಸಿ ಯುದ್ಧದಲ್ಲಿ ಜಯಶೀಲನಾಗಿ ಯಶಸ್ವಿಯಾದ.

🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882, 9845763534.

Related Articles

Leave a Reply

Your email address will not be published. Required fields are marked *

Back to top button