ಪ್ರಮುಖ ಸುದ್ದಿ
BREAKING ಪಂಚಮಸಾಲಿ ಉಚ್ಛಾಟಿತ ಪೀಠಾಧ್ಯಕ್ಷರ ವಿರುದ್ಧ CD ಬಾಂಬ್ ಸಿಡಿಸಿದ ಕಾಶಪ್ಪನವರ್..!
ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರ ಉಚ್ಛಾಟನೆ

ಪಂಚಮಸಾಲಿ ಉಚ್ಛಾಟಿತ ಪೀಠಾಧ್ಯಕ್ಷರ ವಿರುದ್ಧ CD ಬಾಂಬ್ ಸಿಡಿಸಿದ ಕಾಶಪ್ಪನವರ್..!
ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರ ಉಚ್ಛಾಟನೆ
ವಿನಯವಾಣಿ
ಬಾಗಲಕೋಟೆಃ ಕೂಡಲಸಂಗಮ ಪಂಚಮಸಾಲಿ ಪೀಠಾದ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಿದ ಸುದ್ದಿ ಹೊರ ಬರುತ್ತಿದ್ದಂತೆ, ಬೆನ್ನ ಹಿಂದೆಯೇ ಪಂಚಮಸಾಲಿ ಸಮಾಜದ ಮುಖಂಡ ಮತ್ತು ಪಂಚಮಸಾಲಿ ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಉಚ್ಛಾಟನೆಗೆ ಒಳಗಾದ ಬಸವಮೃತ್ಯುಂಜಯ ಸ್ವಾಮೀಜಿ ವಿರುದ್ಧ CD ಬಾಂಬ್ ಸಿಡಿಸಿದ್ದು, ಸಮಯ ಬಂದಾಗ ಬಿಡುಗಡೆಗೊಳಿಸುವೆ ಎಂದು ಹೇಳಿಕೆ ನೀಡುವ ಮೂಲಕ ಸಮಾಜದ ಜನರಲ್ಲಿ ಸಂಚಲನ ಜತೆಗೆ ಗಲಿಬಿಲಿ ಮೂಡಿಸಿದ್ದಾರೆಂದರೆ ತಪ್ಪಾಗಲಾರದು.
ಅಲ್ಲದೆ ಮುಂದುವರೆದು ಹೇಳಿಕೆ ನೀಡಿದ ಅವರು, ಸ್ವಾಮೀಜಿಗಳು ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವೆಡೆ ಆಸ್ತಿಗಳನ್ನು ಮಾಡಿದ್ದು, ಅಲ್ಲದೆ ಟ್ರಸ್ಟ್ ಸದಸ್ಯರ ಮಾತುಗಳನ್ನು ಆಲಿಸುವದಿಲ್ಲ ಎಂಬುದನ್ನಿ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದಿದ್ದಾರೆ.