ಬೆಳ್ಳಂ ಬೆಳಗ್ಗೆ ದರ್ಶನಾಪುರ ಬೈಕ್ ಮೇಲೆ ಸಿಟಿ ರೌಂಡ್
ಶಹಾಪುರಃ ಬೆಳ್ಳಂ ಬೆಳಗ್ಗೆ ಸಚಿವ ದರ್ಶನಾಪುರ ಬೈಕ್ ಮೇಲೆ ಸಿಟಿ ರೌಂಡ್ಸ್

ಬೆಳ್ಳಂ ಬೆಳಗ್ಗೆ ದರ್ಶನಾಪುರ ಬೈಕ್ ಮೇಲೆ ಸಿಟಿ ರೌಂಡ್
ಶಹಾಪುರಃ ಬೆಳ್ಳಂ ಬೆಳಗ್ಗೆ ಸಚಿವ ದರ್ಶನಾಪುರ ಬೈಕ್ ಮೇಲೆ ಸಿಟಿ ರೌಂಡ್ಸ್

ವಿನಯವಾಣಿ
ಶಹಾಪುರಃ ಇಂದು ಬುಧವಾರ ಬೆಳ್ಳಂ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕರ್ತರೊಬ್ಬರ ಬೈಕ್ ಏರಿ ನಗರ ಪ್ರದಕ್ಷಿಣೆ ಹಾಕಿದ್ದಾರೆ.
ಬೈಕ್ ಮೇಲೆ ನಗರದಲ್ಲಿ ನಡೆದ ಕಾಮಗಾರಿಗಳು ಸೇರಿದಂತೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಅಲ್ಲದೆ ಕ್ರೀಡಾಂಗಣ ಬಳಿ ಸಾರ್ವಜನಿಕವಾಗಿ ಓಪನ್ ಜಿಮ್ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. ಓಪನ್ ಜಿಮ್ ಒಳಗಡೆ ಪ್ರವೇಶಿಸಿದ ದರ್ಶನಾಪುರ ಅವರು, ಜಿಮ್ ನ ಹಲವು ಸಾಮಾಗ್ರಿಗಳನ್ನು ಉಪಯೋಗಿಸಿ ಗುಣಮಟ್ಟದ ಬಗ್ಗೆ ಮಾತನಾಡಿದರು.
ನಾಗರಿಕರ ಆರೋಗ್ಯ ಅನುಕೂಲಕ್ಕೆ ಓಪನ್ ಜಿಮ್ ಅಗತ್ಯ ಇರುವದನ್ನು ಮನಗಂಡು ನಿರ್ಮಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆಯಬೇಕೆಂದ ಅವರು, ಕ್ರೀಡಾಂಗಣ, ಓಪನ್ ಜಿಮ್ ಮತ್ತು ಬ್ಯಾಡ್ಮಿಂಟನ್ ಕೋಟ್, ಟೆನ್ನಿಸ್ ಕೋಟ್ ಎಲ್ಲವೂ ಸೂಕ್ತ ನಿರ್ವಹಣೆ ಮಾಡವೇಕಿದೆ. ಸಮಾಜದ ಆಸ್ತಿ ಇದಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಗುರು ಮಣಿಕಂಠ, ಪಾಶಾ ಪಟೇಲ್, ವಿನಯರಡ್ಡಿ ಗೂಗಲ್, ಮಹೇಶ ಎನ್ವಿಎಂ, ಸಾಯಬಣ್ಣ ಪುರ್ಲೆ ಇತರರಿದ್ದರು.
ಜಾಲಿ ಮೂಡಿನಲ್ಲಿದ್ದ ಸಚಿವರುಃ ಕಾಫಿ ಸೇವನೆ
ಬುಧವಾರ ಬೆಳ್ಳಂ ಬೆಳಗ್ಗೆ ಜಾಲಿ ಮೂಡಿನಲ್ಲಿದ್ದ ಸಚಿವ ದರ್ಶನಾಪುರ ಅವರು, ಸಿಟಿ ರೌಂಡ್ ಹಾಕಿ ಹಲವು ಕಾಮಗಾರಿಗಳನ್ನು ವೀಕ್ಷಿಸಿ, ನಂತರ ನಂದಿ ಹೊಟೇಲ್ ನಲ್ಲಿ ಕಾಫಿ ಸೇವನೆ ಮಾಡಿದರು. ಸಾರ್ವಜನಿಕರು ಸಚಿವರ ಸರಳತೆ ಕಂಡು ಹಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವದು ಕಂಡು ಬಂದಿತು.