ಪ್ರಮುಖ ಸುದ್ದಿವಿನಯ ವಿಶೇಷ

ಮೌಲ್ಯಾಧಾರಿತ ಬದುಕಿನ ಮೂಲ ಶಕ್ತಿ‌ ತೋರಿದ “ಕಾಂತಾರಾ”

ಕಾಂತಾರ- 1 ಮೌಲ್ಯಾಧಾರಿತ ಚಿತ್ರ ನೋಡಲೇ ಬೇಕು..!

ಮೌಲ್ಯಾಧಾರಿತ ಬದುಕಿನ ಮೂಲ ಶಕ್ತಿ‌ ತೋರಿದ “ಕಾಂತಾರಾ”

ವಿನಯವಾಣಿ
ಮಲ್ಲಿಕಾರ್ಜುನ ಮುದ್ನೂರ

ರಾಜ್ಯದ ಬೀದರ ನಗರದ ಸಿನಿಮಾ‌ ಥೇಟರ್ವೊಂದರಲ್ಲಿ ಶನಿವಾರ ಸಂಜೆ 5-30 ರ ಶೋ “ಕಾಂತಾರ” – ಚಾಪ್ಟರ್ – 1 ಸಿನಿಮಾ ನೋಡಿದೆ. ಅದ್ಭುತ ದೃಶ್ಯ‌ ಮಾಧ್ಯಮ,‌ ಸೌಂಡ್ ಸಿಸ್ಟಮ್ ಉತ್ತಮ‌ ನಿರೂಪಣೆಯೊಂದಿಗೆ ಸಿನಿಮಾ ಸೊಗಸಾಗಿ ಮೂಡಿ ಬಂದಿದೆ.

ದೈವ, ಧರ್ಮ, ನಂಬಿಕೆ‌, ಶೌರ್ಯ, ತ್ಯಾಗ, ಸಂಪ್ರೀತಿ, ಒಗ್ಗಟ್ಟು ಇದು ಮೌಲ್ಯಾಧಾರಿತ ಬದುಕು ಪಾರಂಪರಿಕವಾಗಿ ರೂಢಿಸಿಕೊಂಡು ಬದುಕುವವರಲ್ಲಿ ಕಂಡು ಬರುವ ಗುಣಗಳನ್ನೆ ಶಿವ ಗಣ, ದೈವ ಗಣ ರೂಪದಿ ಸಮಾಜದ ಮುಂದೆ ವಾಸ್ತವಿಕ ಜೀವನಾಧರಿಸಿ ಅದ್ಭುತ ಪರಿಕಲ್ಪನೆಯೊಂದಿಗೆ ಐತಿಹಾಸಿಕ ಸೂಕ್ಷ್ಮತೆಯನ್ನು ಬಳಸಿ ತಾಂತ್ರಿಕತೆಯ ವೈಭವದೊಂದಿಗೆ ಅತ್ಯುತ್ತಮವಾಗಿ ಕಥೆ ನಿರೂಪಣೆ, ನಿರ್ದೇಶನ ಮಾಡುವ ಮೂಲಕ‌ ಅತ್ಯದ್ಭುತ ಸೌಂಡ್ ಸಿಸ್ಟಮ್ ಬಳಸಿ SANDALWOOD ನಲ್ಲಿ “ಕಾಂತಾರ” 1st ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದೆ ಎಂದರೆ ತಪ್ಪಿಲ್ಲ.

ಚಿತ್ರಕಥೆ, ನಟ,‌ ನಿರ್ದೇಶಕನಾಗಿ ರಿಷಬ್‌ ಶೆಟ್ಟಿ ಬಹು ಪ್ರತಿಭೆಯ ಬುದ್ಧವಂತ ಧಾರ್ಮಿಕತೆ, ಐತಿಹಾಸಿಕ ಕಥೆಗಳನ್ನು ತುಂಬಾ ಚನ್ನಾಗಿ‌ ಕಟ್ಟಿಕೊಟ್ಟಿದ್ದಾರೆ.
ಧರ್ಮ ಅಧರ್ಮ‌ ನಡುವೆ ನಡೆಯುವ ಯುದ್ಧ‌ ಯಾವ್ಯಾವ ಹಂತ ತಲುಪಬಹುದು.‌ ದೈವ ನಂಬಿದ ಜನರ ಮೇಲೆ ದೌರ್ಜನ್ಯ ನಡೆಯುವ ಜತೆಗೆ ದೈವ ಅಂದರೆ ದೇವರನ್ನೆ‌ ದಿಗ್ಭಂಧನ ಹಾಕುವ ಕೆಟ್ಟ ಶಕ್ತಿಯ ಅನಾವರಣವು ಮಾಡಲಾಗಿದೆ.‌ ಇದೆಲ್ಲವು ಪುರಾಣ,‌ ಪೌರಾಣಿಕ ಕಥೆಗಳಲ್ಲಿ ಕೇಳಿರಬಹುದು,‌ ಆದರೆ, “ಕಾಂತಾರ” ಎರಡು ಸಿನಿಮಾಗಳ ಮೂಲಕ ಧಾರ್ಮಿಕತೆಯ ಶಕ್ತಿ ಏನು ಎಂಬುದನ್ನು ರಿಷಬ್ ಶೆಟ್ಟಿ ಉತ್ತಮವಾಗಿ ಜನರ ಅರಿವಿಗೆ ಬರುವಂತ ಪರಕಲ್ಪನೆ ರೂಪಿಸಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೊಂದು ಪ್ರಸ್ತುತ ಕಾಲದಲ್ಲಿ ದೈವ, ಧರ್ಮ ನಂಬಿಕೆ‌ ಆಧಾರಿತ ಪೌರಾಣಿಕ, ಐತಿಹಾಸಿಕ ಸಾಮಾಜಿಕ‌ ಘಟನೆಗಳ ಮೂಲಕ ನಿಜಾಂಶ ಮೌಲ್ಯಾಧಾರಿತದ ಶಕ್ತಿ ಎಂಥದ್ದು,‌ ಅದಕ್ಕೆ ಸವಾಲೊಡ್ಡಿ ಬರುವ ರಾಕ್ಷಸ ಗಣದ ಶಕ್ತಿಗಳು‌ ಅದನ್ನೆದುರಿಸಲು ದೈವಿಕ‌ ಶಕ್ತಿಯ ಅವತಾರ ಎಲ್ಲವೂ ಸಮಾಗಮವಾಗಿ ಸರಾಗವಾಗಿ ದೇವ ಗಣಗಳ ಹಲವು ರೂಪಗಳ ಸಮೇತ ದುಷ್ಟ ಶಕ್ತಿ ಅಂತಿಮವಾಗಿ ಹೇಗೆ ನಾಶವಾಗಲಿದೆ ಎಂಬುದನ್ನು ಅರಿತು‌ ನಾವೆಲ್ಲ ಮೌಲ್ಯಾಧಾರಿತ ಬದುಕು ರೂಢಿಸಿಕೊಳ್ಳಬೇಕಿದೆ. ಅಂದರೆ ಧಾರ್ಮಿಕತೆ,‌ ಧರ್ಮ, ನಂಬಿಕೆ ಯನ್ನೊಳಗೊಂಡ ಜೀವನ‌ ಕಟ್ಟಿಕೊಂಡಲ್ಲಿ ಮೌಲ್ಯಗಳು ತನ್ನಿಂದಾನೆ ಮನುಷ್ಯನಲ್ಲಿ ಪುಟಿದ್ಹೇಳಲಿವೆ ಎಂಬುದು ನಾವೆಲ್ಲ ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ರಿಷಬ್ ಶೆಟ್ಟಿಯ ಮುಂದಿನ ಇನ್ನೊಂದು ದಂತಕಥೆ‌ “ಕಾಂತಾರ”- 2 ಹೊರಹೊಮ್ಮಲಿ ಎಂಬುದೇ ಪ್ರೇಕ್ಷಕರ ಆಶಯ.

ಮಸಾಲೆ‌ ಪದಾರ್ಥಗಳ ಮೂಲ ತಾಣ ಭಾರತ – ಕಾಂತಾರ ಮತ್ತೊಮ್ಮೆ ಸಾಕ್ಷಿಕರಣ

ಸಾವಿರಾರು ವರ್ಷಗಳ್ಹಿಂದಿನಿಂದಲೂ ನಮ್ಮ ಭಾರತದ ಫಲವತ್ತಾ ಅರಣ್ಯ ಪ್ರದೇಶದಲ್ಲಿ ಮಸಾಲಾ‌ ಪದಾರ್ಥಗಳು ಯಚ್ಛೇತವಾಗಿ ಬೆಳೆಯುತ್ತಿದ್ದವು. ಅವುಗಳನ್ನು ಭಾರತೀಯರು ಆರೋಗ್ಯ ದೃಷ್ಟಿ ಯಿಂದ ಅಡುಗೆಗೆ ಬಳಕೆ ಮಾಡಲಾಗುತಿತ್ತು. ಕರಿ ಮೆಣಸು,‌ ದಾಲ್ಚಿನ್ನಿ, ಯಾಲಕ್ಕಿ, ಜೀರಗಿ, ಹರಿಶಿಣ ಸೇರಿದಂತೆ ಹಲವಾರು ಮಸಾಲಾ ಪದಾರ್ಥಗಳು ಬೆಳೆಯುವಂಥ ಪ್ರದೇಶ ಭಾರತ. ಅವುಗಳ ಬಗ್ಗೆ ತಿಳಿದುಕೊಂಡ ಯುರೋಪಿಯನ್ನರು ನಮ್ಮ ದೇಶಕ್ಕೆ ಲಗ್ಗೆ ಇಟ್ಟು ಮಸಾಲೆ ಪದಾರ್ಥ‌ ವ್ಯಾಪಾರಕ್ಕೆ ಇಳಿದರು. ನಂತರ ಅರಬ್ ದವರು ಬಂದರು. ಈ ಐತಿಹಾಸಿಕ ಸನ್ನಿವೇಶ ಕಾಂತಾರದಲ್ಲಿ ಸೂಕ್ಷ್ಮವಾಗಿ ಬಳಸಿದ್ದು,‌ ಐತಿಹಾಸಿಕ ಮಸಾಲಾ ಪದಾರ್ಥದ ಬಗ್ಗೆ ಸ್ಮರಿಸಿದಂತಾಗಿದೆ. ತನ್ಮೂಲಕ ದೇಶದ‌ ಹಿರಿಮೆ‌ ಸಾಕ್ಷೀಕರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button