ಪ್ರಮುಖ ಸುದ್ದಿ

ಕಳ್ಳನ ಬಂಧಿಸುವಲ್ಲಿ ಲಿಂಗಸೂಗೂರ ಪಿಐ ಹೊಸಕೇರಪ್ಪ ನೇತೃತ್ವದ ತಂಡ ಯಶಸ್ವಿ

ಕಳುವಾಗಿದ್ದ 4.5 ತೊಲಿಯ ಮಾಂಗಲ್ಯ ಸರ, ಸ್ಯಾಮ್ಸಂಗ್ ಮೊಬೈಲ್ ವಶಕ್ಕೆ

ಕಳ್ಳನ ಬಂಧಿಸುವಲ್ಲಿ ಲಿಂಗಸೂಗೂರ ಪಿಐ ಹೊಸಕೇರಪ್ಪ ನೇತೃತ್ವದ ತಂಡ ಯಶಸ್ವಿ

ಕಳುವಾಗಿದ್ದ 4 ತೊಲಿಯ ಮಾಂಗಲ್ಯ ಸರ, ಸ್ಯಾಮ್ಸಂಗ್ ಮೊಬೈಲ್ ವಶಕ್ಕೆ

ವಿನಯವಾಣಿ
ಲಿಂಗಸೂಗೂರಃ ಲಿಂಗಸೂಗೂರ ಠಾಣಾ ವ್ಯಾಪ್ತಿ ಮನೆಯೊಂದರಲ್ಲಿಟ್ಟಿದ್ದ 4 ತೊಲೆ 5 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಒಂದು ಸ್ಯಾಮ್ಸಂಗ್ ಮೊಬೈಲ್ ಕಳುವಾದ ಘಟನೆ ಜ.19 ರಂದು ಬೆಳಗಿನ ಜಾವ ಜರುಗಿತ್ತು.
ಈ ಕುರಿತು ಸಂಬಂಧಿಸಿದ ರಂಗನಾಥ ಕುಲಕರ್ಣಿ ಎಂಬುವರು ಠಾಣೆಗೆ ಹಾಜರಾಗಿ ದೂರು ಮಾಂಗಲ್ಯ ಸರ ಹಾಗೂ ಮೊಬೈಲ್ ಕಳುವಾಗಿರುವ ಬಗ್ಗೆ ದೂರು ನೀಡಿ ಪತ್ತೆ ಮಾಡಿಕೊಡುವಂತೆ ಕೇಳಿದ್ದರು. ಠಾಣಾಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು,‌‌ ಹೆಚ್ಚುವರಿ ಪೊಲೀಸ್ ಅಧೀಕ್ಷರು ಮತ್ತು ಡಿಎಸ್ ಪಿ ಲಿಂಗಸೂಗೂರ ಅವರ ಮಾರ್ಗದರ್ಶನದಲ್ಲಿ ಲಿಂಗಸೂಗೂರ ಪೊಲೀಸ್ ಠಾಣೆಯ ಪಿಐ ಹೊಸಕೇರಪ್ಪ ಇವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು,‌ ತಂಡದ ಕಾರ್ಯಾಚರಣೆ ನಂತರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿ ನಗರದ ಪ್ರವಾಸಿ ಮಂದಿರದ ಹತ್ತಿರ ಲಿಂಗಸೂಗೂರ – ಮುದಗಲ್‌ ರಸ್ತೆ ಪಕ್ಕದಲ್ಲಿ ಅನುಮಾನಸ್ಪದವಾಗಿ ನಿಂತಿರುವದನ್ನು ಗಮನಿಸಿ ಠಾಣೆಗೆ ಕರೆ ತಂದು ವಿಚಾರಿಸಲಾಗಿ ಆರೋಪಿ ಮನೆ ಕಳುವು ಮಾಡಿರಯವ ಬಗ್ಗೆ ಒಪ್ಪಿಕೊಂಡು, ಆತನಿಂದ ಮಾಂಗಲ್ಯ ಸರ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಯಿತು. ಅಲ್ಲದೆ ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ತಂಡ ನೇತೃತ್ವವಹಿಸಿದ ಪಿಐ ಹೊಸಕೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ತಂಡದಲ್ಲಿ ಇಎಸ್ ಐ ರತ್ನಮ್ಮ, ಪೊಲೀಸ್ ಸಿಬ್ಬಂದಿಗಳಾದ ಈರಣ್ಣ, ಸಿದ್ದಪ್ಪ, ಸೋಮು, ಭೀಮಣ್ಣ, ಬಸವರಾಜ ಇವರ ಕಾರ್ಯಾಚರಣೆಗೆ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೆ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button