ರಾಜ್ಯದ ಬೊಕ್ಕಸ ಖಾಲಿಯಾಗಿದೆಯಂತೆ..?
ಕಾಂಗ್ರೆಸ್ ನಾಯಕರು ಆಧುನಿಕ ಭಸ್ಮಾಸುರರು.!
ಉಡುಪಿಃ ವಿಧಾನಸಭೆ ವಜ್ರಮಹೋತ್ಸವ ಆಚರಣೆ ಸಂದರ್ಭದಲ್ಲಿ ಶಾಸಕರಿಗೆ ಚಿನ್ನದ ಬಿಸ್ಕೆಟ್ ಕೊಡುಗೆಯಾಗಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ರಾಜ್ಯದ ಜನರು ಮೌನವಾಗಿ ಗಮನಿಸುತ್ತಿದ್ದಾರೆ. ಚಿನ್ನದ ಬಿಸ್ಕೆಟ್ ಹಂಚಿಕೆ ಬಗ್ಗೆ ಜನ ಕೇವಲವಾಗಿ ಮಾತನಾಡುವಂತಾಗಿದೆ, ಇದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಉಡುಪಿ ತಾಲೂಕಿನ ಬ್ರಹ್ಮಾವರ ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡುತ್ತಿರುವ ಚಿನ್ನದ ಬಿಸ್ಕೆಟ್‍ನ್ನು ಬಿಜೆಪಿ ಶಾಸಕರು ಯಾರು ತೆಗೆದುಕೊಳ್ಳಬೇಡಿ. ರಾಜ್ಯದ ಜನರು ಯಾವ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸ್ಥಿತಿಗತಿ ಏನಿದೆ ಎಂಬುದರ ಅರಿವು ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಜವಬ್ದಾರಿಯುತ ಸಚಿವರಾರು ಸಮರ್ಪಕ ಮಾಹಿತಿಯನ್ನು ರಾಜ್ಯದ ಹೆಡ್ ಮಾಸ್ಟರ್‍ಗೆ ನೀಡುತ್ತಿಲ್ಲ ಎಂದ ಅವರು, ಜನರ ತೆರಿಗೆ ಹಣದ ಬಿಸ್ಕೆಟ್ ಪಡೆದ ಶಾಸಕರು ಎಂಬ ಅಪಕೀರ್ತಿಗೆ ನಾವು ಪಾತ್ರರಾಗೋದು ಬೇಡ ಎಂದರು.
ಈಗಾಗಲೇ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಚುನಾವಣೆ ಸಮೀಸುತ್ತಿದ್ದಂತೆ ಬೇಕಾಬಿಟ್ಟಿಯಾಗಿ ಖರ್ಚುಮಾಡಿ ಸರ್ಕಾರದ ಬೊಕ್ಕಸ ಖಾಲಿ ಮಾಡಿಕೊಂಡು ಕುಳಿತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ ಆರೋಪಿಸಿದರು. ಇಂತಹ ವಿಷಮ ಸ್ಥಿತಿಯಲ್ಲಿ ಶಾಸಕರಿಗೆ ಚಿನ್ನದ ಬಿಸ್ಕೆಟ್ ಬೇರೆ ನೀಡುತ್ತಿದ್ದಾರಂತೆ ಇದೆಲ್ಲ ಯಾರ ಹಣ, ಸಾರ್ವಜನಿಕರ ಹಣದಿಂದ ನಾವು ಕೊಡುಗೆ ಪಡೆದುಕೊಳ್ಳುವುದು ಬೇಡ ಎಂದರು.
ಸಿಎಂ ಸಿದ್ರಾಮಯ್ಯರದ್ದು ಮೂರು ಸಾಧನೆ : ಅನಂತಕುಮಾರ ಕಿಡಿ
ಕಾಂಗ್ರೆಸ್ ನಾಯಕರು ಆಧುನಿಕ ಭಸ್ಮಾಸುರರು. ವಿಭೀಷಣ, ರಾವಣ ಸೇನೆ ಬಿಟ್ಟು ರಾಮನ ಸೇನೆ ಸೇರಿದ್ದಾರೆ ಅನ್ನುವ ಮೂಲಕ ಸಿಎಂ ಸಿದ್ರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿ ಕೇಂದ್ರ ಸಚಿವ ಅನಂತಕುಮಾರ ವಿಡಂಬಣೆ ಮಾಡಿದರು. ಸಿದ್ರಾಮಯ್ಯನವರ ಮೂರು ಪ್ರಮುಖ ಸಾಧನೆಗಳೆಂದರೆ ಅಹಂಕಾರ, ಅವ್ಯವಹಾರ ಮತ್ತು ಅಸಡ್ಡೆ ಇವೇ ಅವರ ಸಾಧನೆಗಳು ಎಂದು ಅನಂತಕುಮಾರ್ ವ್ಯಂಗ್ಯವಾಡಿದರು.