ವಾಟರ್ ಜಾಕ್ವೇಲ್ ಬಳಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಅನಿರ್ಧಿಷ್ಟವಧಿ ಧರಣಿ..?
ಯಾದಗಿರಿಃ ಇಂತದ್ಯಾವುದಕ್ಕೂ ಹೆದರುವವ ನಾನಲ್ಲ – ಪೌರಾಯುಕ್ತ ಉಪಾಸೆ ಹೇಳಿಕೆ
ಯಾದಗಿರಿಃ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಇಲ್ಲಿನ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆಯವರು ರಜೆ ಹೋಗಿದ್ದು ಮತ್ತು ವಾಟರ್ ಜಾಕ್ವೇಲ್ ಬಳಿ ಸಿಬ್ಬಂದಿ ನಿಯೋಜನೆ ಮಾಡದೆ ನಿರ್ಲಕ್ಷ್ಯ ತೋರಿರುವ ಆಯುಕ್ತರ ನಡೆಯನ್ನು ಖಂಡಿಸಿ ನಗರಸಭೆ ಅದ್ಯಕ್ಷೆ ಲಲಿತಾ ಅನಪೂರ ನೇತೃತ್ವದಲ್ಲಿ ವಾಟರ್ ಜಾಕ್ವೇಲ್ ಬಳಿಯೇ ಅರ್ನಿದಿಷ್ಟವದಿ ಧರಣಿ ಸತ್ಯಗ್ರಹ ನಡೆಸಲಾಗುತ್ತಿದೆ.
ನಗರದ ಹೊರ ವಲಯದ ಭೀಮಾನದಿ ಬಳಿಯಿರುವ ವಾಟರ್ ಜಾಕ್ವೇಲ್ ಬಳಿ ನಗರಸಭೆ ಅದ್ಯಕ್ಷೆ ಲಲಿತಾ ನಡೆಸುತ್ತಿರುವ ಧರಣಿಯಲ್ಲಿ ನಗರಸಭೆ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಾಟರ್ ಜಾಕ್ವೇಲ್ ತುಂಬ ಸೂಕ್ಷ್ಮವಾದ ಸ್ಥಳವಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ ನಗರಸಭೆ ಆಯುಕ್ತರು ಸಿಬ್ಬಂದಿ ನೇಮಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ರು. ಇನ್ನು ದೀಪಾವಳಿ ವೇಳೆ ಎಲ್ಲಾ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಆದಾಗ್ಯು ಜಿಲ್ಲಾಧಿಕಾರಿಗಳ ಆದೇಶ ಕಡೆಗಣಿಸಿ ಆಯುಕ್ತರು ರಜೆ ಹಾಕಿ ತಮ್ಮ ಊರಿಗೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮತ್ತು ಆಯುಕ್ತ ಸಂಗಮೇಶ ಉಪಾಸೆ ಮಧ್ಯೆ ಶೀತಲ ಸಮರ ಮುಂದುವರೆದಿದೆ. ಇತ್ತೀಚೆಗೆ ಬೃಹತ್ ಮೊತ್ತದ ಟೆಂಡರ್ ಪ್ರಕಟಣೆಯಲ್ಲಿ ಲೋಪವಾಗಿರುವದನ್ನು ಪತ್ತೆ ಮಾಡಿದ್ದ ಆಯುಕ್ತರು, ಟೆಂಡರ್ ರದ್ದು ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾಪ್ರಭುತ್ವದ ಮೇಲೆ ಭರವಸೆಯಿಟ್ಟು ಕೆಲಸ ಮಾಡುವವ ನಾನುಃ ಉಪಾಸೆ
ನಗರಸಭೆ ಆಯುಕ್ತರ ನಡೆ ಖಂಡಿಸಿ ಫಿಲ್ಟರ್ ಬೆಡ್, ವಾಟರ್ಜಾ ಕ್ವೇಲ್ ಹತ್ತಿರ ನಗರಸಭೆ ಅಧ್ಯಕ್ಷೆ ಅನಪೂರ ನಡೆಸುತ್ತಿರುವ ಧರಣಿ ಕುರಿತು ಆಯುಕ್ತ ಸಂಗಮೇಶ ಉಪಾಸೆ ಅವರನ್ನು ವಿನಯವಾಣಿ ಸಂಪರ್ಕಿಸಿದಾಗ, ಫಿಲ್ಟರ್ ಬೆಡ್, ವಾಟರ್ ಜಾಕ್ಸವೇಲ್ ನ ಬೃಹತ್ ಕಾಮಗಾರಿ ನಡೆದಿದೆ. ಸ್ಥಳದಲ್ಲಿ ನಮ್ಮ ಎಇಇ, ಜೆಇ ಮತ್ತು ಸುಪರ್ವೈಸರಗಳು ಇದ್ದಾರೆ.
ಕೆಎಐಡಿ ಟೀಮ್ಗೆ ಅದರ ನಿರ್ವಹಣೆ ಜವಬ್ದಾರಿ ಇದೆ. 15 ಜನ ಅಲ್ಲಿ ಈಗಾಗಲೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಅಂತಹ ಯಾವುದೆ ಸಮಸ್ಯೆ ಇಲ್ಲ. ಬೇಕಂತಲೇ ನಾನು ರಜೆ ಇದ್ದಾಗ, ಇಂತಹ ಸಮಸ್ಯೆ ಹುಟ್ಟುಹಾಕೋಕೆ ನೋಡ್ತಾ ಇದ್ದಾರೆ. ಇದಕ್ಕೆಲ್ಲ ನಾನು ಹೆದರುವವನಲ್ಲ. ಪ್ರಜಾಪ್ರಭುತ್ವದ ಮೇಲೆ ಭರವಸೆ ಇಟ್ಟು ಕೆಲಸ ಮಾಡುವವ ನಾನು ಎಂದರು.
ನಾನು ಕೂಡ ಹೋರಾಟದಿಂದಲೇ ಬಂದವನು. ವಿವಿಧಡೆ ಕರ್ತವ್ಯ ನಿರ್ವಹಿಸುವಾಗ ಇಂತಹ ಸಾಕಷ್ಟು ಹೋರಾಟ, ಧರಣಿಗಳನ್ನು ಎದುರಿಸಿದ್ದೇನೆ. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಅಂತಿಮವಾಗಿ ಸತ್ಯಮೇವ ಜಯತೆ, ಸತ್ಯಕ್ಕೆ ಜಯ ಸಿಗಲೇಬೇಕು. ನಾನು ರಜೆ ಮುಗಿಸಿ ಅ.25 ರಂದು ಬರುತ್ತೇನೆ. ಈಗಾಗಲೇ ಕೆಲವು ವಾರ್ಡ್ಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ 28, 29, 30, 31 ನಾಲ್ಕು ವಾರ್ಡ್ಗಳಿಗೆ ನೀರು ಸರಬರಾಜು ವ್ಯವಸ್ಥೆ ಮಾಡಲಿದ್ದೇನೆ. ನನ್ನ ಕೆಲಸ ನಾನು ಮಾಡುತ್ತೇನೆ ಅಷ್ಟೆ. ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ನಾನು ನನ್ನ ಕರ್ತವ್ಯ ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಸ್ಪಷ್ಟವಾಗಿ ಉತ್ತರಿಸಿದರು.