ಪ್ರಮುಖ ಸುದ್ದಿ
ವೀರಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
ಸೇನಾ ಯೋಧರೆ ನನಗೆ ಸ್ಪೂರ್ತಿ -ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ಪ್ರದೇಶದಲ್ಲಿ ಯೋಧರ ಜೊತೆಗೆ ಸಡಗರ, ಸಂಭ್ರಮದ ದೀಪಾವಳಿ ಆಚರಿಸಿದರು. ಖುದ್ದಾಗಿ ಯೋಧರನ್ನು ಭೇಟಿ ಮಾಡಿ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ಮೋದಿ ಯೋಧರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದರು. ಈ ವೇಳೆ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೀವೆಲ್ಲಾ ಯೋದರು ನಮ್ಮ ಪರಿವಾರದ ಸದಸ್ಯರು. ನಿಮ್ಮೊಂದಿಗೆ ದೀಪದ ಹಬ್ಬ ಆಚರಿಸಿದ್ದು ನನ್ನ ಕುಟುಂಬದ ಜೊತೆಗೆ ಹಬ್ಬ ಆಚರಿಸಿದಷ್ಟೇ ಖುಷಿ ನೀಡಿದೆ ಎಂದರು.
ನಮ್ಮ ಸರ್ಕಾರ ದೇಶ ರಕ್ಷಕ ವೀರ ಯೋಧರ ಹಿತ ಕಾಯಲು ಮೊದಲ ಆದ್ಯತೆ ನೀಡುತ್ತದೆ. ನಿಮ್ಮ ಭೇಟಿ ನನಗೆ ಪ್ರತಿಸಲವೂ ಹೊಸ ಶಕ್ತಿ ತುಂಬುತ್ತದೆ ಎಂದು ಹೇಳಿದರು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ದರು.
It’s really great sir..Hat’s of to P.M.Modi.& our soldiers..