ದೊಡ್ಡ ಬದಲಾವಣೆಗೆ ಸ್ವಲ್ಪ ಸಮಯ ಬೇಕು -ಅರುಣ್ ಜೇಟ್ಲಿ
ನವದೆಹಲಿಯಲ್ಲಿಂದು ಸುದ್ದಿ ಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಸುದ್ದಿ ಗೋಷ್ಠಿ ನಡೆಸಿ ವಿವರಣೆ ನೀಡಿದ ಸಚಿವ ಅರುಣ್ ಜೇಟ್ಲಿ ಆರ್ಥಿಕ ಸವಾಲೆದುರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
GST ಯಿಂದ ಸಾಕಷ್ಟು ಸುಧಾರಣೆ ಆಗಲಿದೆ.
ಅರ್ಥ ವ್ಯವಸ್ಥೆ ಬಗ್ಗೆ ಸರ್ಕಾರ ಈಗಾಗಲೇ ಸಮೀಕ್ಷೆ ನಡೆಸಿದೆ. ದೇಶದ ಅರ್ಥವ್ಯವಸ್ಥೆಯ ಅಡಿಪಾಯ ಭದ್ರವಾಗಿದೆ. ಚಾಲ್ತಿ ಖಾತೆ ಶೇಕಡಾ 2ಕ್ಕಿಂತ ಕೊರತೆಯಿದೆ. ಸರ್ಕಾರಕ್ಕೆ ಅರ್ಥವ್ಯವಸ್ಥೆ ಚರುಕುಗೊಳಿಸುವ ಉದ್ದೇಶವಿದೆ ಎಂದರು.
ಭಾರತದ ಆರ್ಥಿಕ ಸ್ಥಿತಿ ವೇಗವಾಗಿ ಬೆಳೆಯುತ್ತಿದೆ.
ಕಳೆದ 3ವರ್ಷದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ.
ವಿದೇಶಿ ವಿನಿಮಯ 400 ಡಾಲರ್ ಗಿಂತ ಹೆಚ್ಚಾಗಿದೆ.
GST ಜಾರಿಯಿಂದ ಹಣದುಬ್ಬರ ಕುಸಿತವಾಗಿದೆ. ಇದು ಭವಿಷ್ಯದಲ್ಲಿ GDP ದರ ವೃದ್ಧಿಗೆ ನೆರವಾಗಲಿದೆ ಎಂದರು.
21.46ಲಕ್ಷ ಕೋಟಿ ರೂ. ಪೈಕಿ 11. 47ಲಕ್ಷ ಕೋಟಿ ಹಣ ಖರ್ಚಾಗಿದೆ. ರಸ್ತೆ , ಗೃಹ ನಿರ್ಮಾಣ, ರೈಲ್ವೆ, ಡಿಜಿಟಲ್ ಇಂಡಿಯಾ ಸೇರಿ ವಿವಿಧ ಯೋಜನೆಗಳಿಗೆ ಖರ್ಚಾಗಿದೆ. ಮುಂದಿನ 5ವರ್ಷಗಳಲ್ಲಿ 6.92ಲಕ್ಷ ಕೋಟಿ ರೂಪಾಯಿ ರಸ್ತೆ ನಿರ್ಮಾಣಕ್ಕೆ ಹೂಡಿಕೆ ಮಾಡಲಾಗುವುದು. ಎಂದು ತಿಳಿಸಿದರು. ವಿತ್ತ ಸಚಿವಾಲಯ ಕಾರ್ಯದರ್ಶಿ ಸುಭಾಷ್ ಗಾರ್ಗ ಸುದ್ದಿಗೋಷ್ಠಿಯಲ್ಲಿದ್ದು ಮಾಹಿತಿ ನೀಡಿದರು.