ಪ್ರಮುಖ ಸುದ್ದಿ
ಯಾದಗಿರಿಃ ಪ್ರತ್ಯೇಕ ಘಟನೆಗಳಲ್ಲಿ ಎರಡು ಸಾವು
ಸಾಲಬಾಧೆಯಿಂದ ರೈತ ಆತ್ಮಹತ್ಯೆ, ಬಾವಿಗೆ ಬಿದ್ದು ಮಹಿಳೆ ಸಾವು
ಯಾದಗಿರಿ: ಸಾಲಬಾಧೆ ತಾಳಲಾರದೆ ರೈತನೋರ್ವ ತಾನು ಪಾಲಿಗೆ ಮಾಡಿದ ಜಮೀನೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೀಲಕಂಠ ತೋಪು ನಾಯಕ ರಾಠೋಡ (48) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಶಹಾಪುರ ತಾಲೂಕಿನ ಧರ್ಮನಾಯಕ ತಾಂಡಾದಲ್ಲಿ ಘಟನೆ ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಕಡೆ ಸುರಪುರ ತಾಲೂಕಿನ ಗುಗ್ಗಲಗಟ್ಟಿ ಗ್ರಾಮದ ಮಲ್ಲಮ್ಮ (35) ಕುರಿ ಮೇಯಿಸಲು ಹೋದಾಗ ನೀರಿನ ದಾಹ ತಣಿಸಿಕೊಳ್ಳಲು ಬಾವಿಗಿಳಿದಿದ್ದಾಳೆ. ಆದರೆ, ಆಯತಪ್ಪಿ ಕಾಲು ಜಾರಿ ಬಾವಿಯೊಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದದೆ. ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.