ಪ್ರಮುಖ ಸುದ್ದಿ

ಶಹಾಪುರಃವಿಜಯ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ

ಗ್ರಾಹಕರ ಅಭಿವೃದ್ಧಿಗೆ ತೃಪ್ತ ಸಹಕಾರ: ಸರ್ವೇಶ

ಶಹಾಪುರ: ಇಡಿ ರಾಜ್ಯದಲ್ಲಿ ಗ್ರಾಹಕರ ತೃಪ್ತದಾಯಕ ಕೆಲಸವನ್ನು ವಿಜಯ್ ಬ್ಯಾಂಕ್ ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ. ಬ್ಯಾಂಕಿನ ಜತೆಗೆ ಗ್ರಾಹಕರ ಅಭಿವೃದ್ಧಿಗೆ ಸಮರ್ಪಕ ಸಾಲ, ಇತರೆ ಸೌಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ ಎಂದು ಬ್ಯಾಂಕಿನ ಅಧಿಕಾರಿ ಸರ್ವೇಶ ಹೇಳಿದರು.
ನಗರದ ವಿಜಯ್ ಬ್ಯಾಂಕ್ ಶಾಖಾ ಕಚೇರಿಯಲ್ಲಿ ನಡೆದ 87 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಡಿನಾದ್ಯಂತ ವಿಜಯವ ಬ್ಯಾಂಕ್ ಲಕ್ಷಾಂತರ ಜನರ ಅಭಿವೃದ್ಧಿ ಪೂರಕ ಸಾಲವನ್ನು ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿದೆ ಹೀಗಾಗಿ ಉತ್ತಮ ವಿಶ್ವಾಸ ಗಳಿಸಿದೆ. ಅದೇ ರೀತಿ ಇಲ್ಲಿನ ಶಾಖಾ ಬ್ಯಾಂಕ್‍ಗೂ ಗ್ರಾಹಕರ ಸಹಕಾರ ಅಪಾರವಿದೆ. ಗ್ರಾಹಕರ ವ್ಯವಹಾರ, ವ್ಯಾಪಾರಕ್ಕೆ ಬೇಕಾದ ಸಾಲ ಸವಲತ್ತುನ್ನು ಬ್ಯಾಂಕ್ ಒದಗಿಸಿದೆ. ಅದೇ ರೀತಿ ಗ್ರಾಹಕರು ಬ್ಯಾಂಕಿನಿಂದ ಪಡೆದ ಸಾಲದಿಂದ ತಮ್ಮ ಸ್ವಾವಲಂಬಿ ವ್ಯಾಪಾರ ವೃದ್ಧಿಸಿಕೊಂಡು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಅಸಲು, ಬಡ್ಡಿ ಸಮೇತ ಚುಕ್ತಾ ಮಾಡುವ ಮೂಲಕ ಸರ್ವರ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.

ಬ್ಯಾಂಕಿನ ಉತ್ತಮ ಗ್ರಾಹಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಸಂಬಂಧ ವ್ಯಾವಹಾರಿಕವಾಗಿ ಉತ್ತಮವಾಗಿದ್ದಲ್ಲಿ ಯಾವುದೆ ಅಡಚಣೆ ಇಲ್ಲದೆ ವ್ಯಾಪಾರಿ ಮತ್ತು ಬ್ಯಾಂಕಿನ ಕೆಲಸ ಮುನ್ನಡೆಯುತ್ತದೆ ಎಂದು ಸಲಹೆ ನೀಡಿದರು.
ಸಿಬ್ಬಂದಿಗಳಾದ ಸಂದೀಪ ಭಾಸುತ್ಕರ್, ಖಾಜಾ, ಶಕೀಲ್, ಅಶೋಕ ಸೇರಿದಂತೆ ಗ್ರಾಹಕರಾದ ಶಿವಾನಂದ ಹಿರೇಮಠ ಇತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button