ಪ್ರಮುಖ ಸುದ್ದಿ
ಯಾದಗಿರಿಃ ಈಜಲು ತೆರಳಿದ್ದ ಬಾಲಕರಿಬ್ಬರು ನೀರು ಪಾಲು
ಗುರುಮಿಠ್ಕಲ್ ವ್ಯಾಪ್ತಿ ನಡೆದ ಘಟನೆ
ಯಾದಗಿರಿಃಕೆರೆಯಲ್ಲಿ ಈಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಜಿಲ್ಲೆಯ ಗುರುಮಿಠ್ಕಲ್ ವಿಧಾನ ಸಭೆ ವ್ಯಾಪ್ತಿಯ ಚಿನ್ನಾಕಾರ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಕರೆಯೊಂದರಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮಂಜುನಾಥರಡ್ಡಿ (14) ಮತ್ತು ಚನ್ನಾರಡ್ಡಿ (13) ಎಂಬ ಬಾಲಕರೇ ಮೃತಪಟ್ಟ ದುರ್ದೈವಿಗಳು.
ಈ ಕುರಿತು ಗುರುಮಿಠ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.