ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಯೋಜನೆ ನೆರವು
ಶಹಾಪುರಃ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ, ಮಹಿಳಾ ಸಮಾವೇಶ
ಶಹಾಪುರಃ ಮಹಿಳೆಯರು ಅತಿ ಬುದ್ಧಿವಂತರು. ಓರ್ವ ಪುರುಷ ನಿಭಾಯಿಸುವ ಕೆಲಸವನ್ನು ಅವರಿಗಿಂತ ಸುಲಭವಾಗಿ ಚಾಕಚಕ್ಯತೆಯಿಂದ ಮತ್ತು ಸಮರ್ಪಕವಾಗಿ ನಿಭಾಯಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಎ.ದಿನೇಶ ಹೇಳಿದರು.
ನಗರದ ವಿದ್ಯಾನಗರದಲ್ಲಿರುವ ಅಂಭಾ ಭವಾನಿ ಮಂದಿರದ ಸಭಾ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ನಡೆದ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಅಡುಗೆ ಕೆಲಸಕ್ಕೆ ಮಾತ್ರ ಸೀಮಿತ ಎಂಬುದನ್ನು ಮೊದಲು ತಲೆಯಿಂದ ತೆಗೆಯಬೇಕು. ಮಹಿಳೆಯರಲ್ಲಿದ್ದ ಕರಕುಶಲ ಚೈತನ್ಯ ಯಾವ ಪುರಷರಲ್ಲಿ ಬರದು. ಸಂಸಾರದ ಜಂಜಾಟದೊಂದಿಗೆ ಅವರು ಮನೆಯಲ್ಲಿಯೇ ಹಲವಾರು ಕೆಲಸಗಳನ್ನು ನಿಭಾಯಿಸುತ್ತಾರೆ. ಸಾಕಷ್ಟು ಮಹಿಳೆಯರು ಕರಕುಶಲ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದನ್ನು ವ್ಯಾಪಾರೀಕರಣ ಗೊಳಿಸುವ ಕುರಿತು ಅವರಿಗೆ ತಿಳಿದಿರುವದಿಲ್ಲ. ಅಂತಹ ಮಹತ್ವದ ಸಂಗತಿಗಳನ್ನು ಜ್ಞಾನ ವಿಕಾಸ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.
ಮಹಿಳೆಯರು ತಮ್ಮ ಸಾಮಥ್ರ್ಯ ಅನುಸಾರ ಕೈಗೊಳ್ಳುವ ಕೆಲಸಗಳಿಗೆ ಸಣ್ಣ ಪುಟ್ಟ ವ್ಯಾಪಾರಕ್ಕೆ ಧರ್ಮಸ್ಥಳ ಯೋಜನಾ ಸಂಸ್ಥೆ ವಿವಿಧ ಮೂಲಗಳಿಂದ ಧನ ಸಹಾಯವನ್ನು ನೀಡಲಿದೆ. ಅಲ್ಲದೆ ಸೂಕ್ತ ತರಬೇತಿಗಳನ್ನು ಸಹ ಆಯೋಜಿಸುವ ಮೂಲಕ ಮಹಿಳೆಯರನ್ನು ಅವರ ಇಷ್ಟ ಕರಕುಶಲ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಿದೆ. ಹೀಗಾಗಿ ಮಹಿಳೆಯರು ತಾವುಗಳು ಮೊದಲು ಸ್ವಾವಲಂಬುಯಾಗಿ ಬದುಕು ನಡೆಸುವದನ್ನು ಕಲಿಯಬೇಕು. ಮನೆ ಪರಿಸರ ಸ್ವಚ್ಛತೆಯೊಂದಿಗೆ ಸ್ವಸಾಮಥ್ರ್ಯದೊಂದಿಗೆ ವಿವಿಧ ಕೆಲಸಗಳನ್ನು ಮಾಡಬೇಕು.
ಆ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು. ಅಲ್ಲದೆ ಮಹಿಳೆಯರು ಗೌರವಯುತ ಜೀವನಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಮೊದಲು ಶೌಚಾಲಯವನ್ನು ಹೊಂದಿರಲೇಬೇಕು. ಆ ಕುರಿತು ಗಮನಹರಿಸಬೇಕು. ಅದಕ್ಕೆ ಬೇಕಾದ ಹಲವಾರು ಯೋಜನೆಗಳಿವೆ ಅವುಗಳ ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸರಣಿಯಾಗಿ ಒಬ್ಬರಿಂದ ಒಬ್ಬರಿಗೆ ಈ ಕುರಿತು ಮಾಹಿತಿ ಒದಗಿಸಬೇಕು.
ಅಲ್ಲದೆ ಶೌಚಾಳಯ ಬಳಕೆ ಅಗತ್ಯ ಕುರಿತು ಮನವರಿಕೆ ಮಾಡಬೇಕು. ಮಹಿಳೆಯೊಬ್ಬಳು ಅಕ್ಷರಸ್ಥಳಾದರೆ ಇಡಿ ಕುಟುಂಬ ಅಕ್ಷರಸ್ಥರಾದಂತೆ ಎಂಬ ನುಡಿ ನಿಜಕ್ಕೂ ಸತ್ಯವಾದದು. ಹೀಗಾಗಿ ಯಾವುದೇ ಕಾರ್ಯ ಮೊದಲು ಮನೆಯ ಮಹಿಳೆಯಿಂದ ಅದು ಜಾಗೃತಗೊಂಡಲ್ಲಿ ಆ ಕಾರ್ಯಕ್ರಮ ಯಶಸ್ವಿಯಾಗುವದರಲ್ಲಿ ಸಂಶಯಬೇಡ. ಹೀಗಾಗಿ ಮಹಿಳೆಯರು ಆತಂಕ, ಅಡೆತಡೆಗಳನ್ನು ತೊರೆದು ಯಾವುದೇ ಕೆಸಲವಿರಲಿ ಅದನ್ನು ಚನ್ನಾಗಿ ನಿಭಾಯಿಸುತ್ತೇನೆ ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು.
ಇವತ್ತು ಗಗನಸಕಿಯರಾಗಿ, ಬಸ್ ಕಂಡಕ್ಟರ್, ಡ್ರೈವರ್ ಅಷೇ ಏಕೆ ಪುರಷರಿಗೂ ಮೀರುಸುವಂತ ಕೆಲಸಗಳನ್ನು ಮಹಿಳೆಯರು ಮಾಡಿ ತೋರಿಸಿದ್ದಾರೆ. ಐಟಿಬಿಟಿಯಲ್ಲಿ ಮಹಿಳೆಯರ ಸಾಕಷ್ಟು ಶ್ರಮ ಗುರುತಿಸುತ್ತಿದ್ದೇವೆ. ಅಲ್ಲದೆ ಹಲವಾರು ಕಂಪನಿಗಳು ಮಹಿಳೆಯರ ಶ್ರಮದಿಂದಲೇ ಮುನ್ನಡೆದಿವೆ ಎನ್ನಬಹುದು. ಹೀಗಾಗಿ ಕೇವಲ ಅಡುಗೆ ಮನೆ ಸೇರದೆ ಮಹಿಳೆಯರು ಬಯಲಿಗೆ ಬಂದು ಧೈರ್ಯವಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ಸಹಾಯಧನ ನಮ್ಮ ಸಂಸ್ಥೆ ಸೇರಿದಂತೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡೆಯಬೇಕು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗೋಪಾಲರಾವ ಭಾಸುತ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಒಕ್ಕೂಟ್ಟದ ಅಧ್ಯಕ್ಷೆ ನಿರ್ಮಲ ಅಧ್ಯಕ್ಷೆತೆವಹಿಸಿದ್ದರು. ಸಂಪನ್ಮೂ¯ ವ್ಯಕ್ತಿಯಾಗಿ ಕಸಾಪ ಮಹಿಳಾ ಪ್ರತಿನಿಧಿ ರೇಣುಕಾ ಚಟ್ರಿಕಿ, ನಗರಸಭಾ ಸದಸ್ಯೆ ಸಾವಿತ್ರಿ ಮತ್ತು ಯೋಜನಾಧಿಕಾರಿ ಮೋಹನ್.ಕೆ, ವಲಯ ಮೇಲ್ವಿಚಾರಕಿ ಶಿವಲಿಂಗಮ್ಮ ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾಬಾಯಿ ನಿರೂಪಿಸಿದರು. ತಾಂತ್ರಿಕ ತರಬೇತಿ ಪ್ರಬಂಧಕಿ ಶಕುಂತಲಾ ವಂದಿಸಿದರು. ಸೇವಾ ಪ್ರತಿನಿಧಿಗಳು, ಪದಾಧಿಕಾರಿಗಳು ಮಹಿಳೆಯರು ಭಾಗವಹಿಸಿದ್ದರು.