ಲೋಕಾಯುಕ್ತಕ್ಕೆ ಕೀಲಿ ಜಡಿದು, ಎಸಿಬಿ ಚಾವಿ “ಕೈ” ಹಿಡಿತ -ನಾಗರತ್ನ ಕುಪ್ಪಿ ಆರೋಪ
ಯಾದಗಿರಿಃ ಎಂ.ಟಿ.ಪಲ್ಲಿಯಲ್ಲಿ ಕಮಲ ಹಿಡಿದ ಮಹಿಳೆಯರು
ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಕಾಳಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವ, ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಎಲ್ಲೆಡೆ ಮಹಿಳೆಯರು ತಂಡೋಪತಂಡವಾಗಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ರಾಯಚೂರ ಜಿಲ್ಲೆ ಉಸ್ತುವಾರಿ ನಾಗರತ್ನ ಆರ್.ಕುಪ್ಪಿ ಹೇಳಿದರು.
ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ಎಂ.ಟಿ.ಪಲ್ಲಿಯಲ್ಲಿ ಮಹಿಳೆಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಮಹಿಳೆಯರ ಪರವಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಹಿಳೆಯರ ಸಬಲಿಕರಣಕ್ಕಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಯೋಜನೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಕ್ಕೆ ಉಚಿತ ಒಲೆ ಮತ್ತು ಸಿಲಿಂಡರ್ ನೀಡುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಮುದ್ರಾ ಯೋಜನೆ ಹಾಗೂ ಹತ್ತು ಹಲವು ಜನಪರ ಕಾರ್ಯಕ್ರಮಗಳೇ ಮಹಿಳೆಯರ ಪರ ಎನ್ನುವದಕ್ಕೆ ನಿದರ್ಶನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೂತ ಕಮಿಟಿ ಅಧ್ಯಕ್ಷರುಗಳ ನಿವಾಸದ ಮೇಲೆ ಪಕ್ಷದ ಧ್ವಜಗಳನ್ನು ಹಾರಿಸಲಾಯಿತು. ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಧರರೆಡ್ಡಿ, ತಾಪಂ. ಸದಸ್ಯರಾದ ಭಾಸ್ಕರ ರೆಡ್ಡಿ, ಸಿದ್ರಾಮರೆಡ್ಡಿ, ಬೂತ ಕಮಿಟಿ ಅಧ್ಯಕ್ಷ ನಾಗಪ್ಪ, ವೀರಣ್ಣ ಕುಂಟಿಮರಿ, ಅನಿಲಕುಮಾರ, ಅಶೋಕರೆಡ್ಡಿ, ಕಲ್ಪನಾ ಜೈನ, ಪರ್ವತರೆಡ್ಡಿ, ಶರಣಗೌಡ, ಹಣಮಂತ, ಜಗದೀಶ, ಸಾಬಣ್ಣ, ವೆಂಕಟಮ್ಮ ಹಾಗೂ ಇನ್ನಿತರರಿದ್ದರು.
ಯಡಿಯೂರಪ್ಪ ಜಾರಿಗೆ ತಂದ ಯೋಜನೆಗೆ ಕಾಂಗ್ರೆಸ್ ಬ್ರೇಕ್ ಆಕ್ರೋಶ
ಈಗಿನ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ಜಾರಿಗೊಳಿಸಿದ್ದ ಭಾಗ್ಯಲಕ್ಷಿ ಬಾಂಡಗಳನ್ನು ಕೊಡುತ್ತಿಲ್ಲ. ಸೈಕಲ್‍ಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಬರೀ ಭ್ರಷ್ಟಾಚಾರದಲ್ಲೆ ಮುಳುಗಿದೆ.
ಲೋಕಾಯುಕ್ತ ಬಾಗಿಲು ಮುಚ್ಚಿ, ತಮ್ಮ ಹಿಡಿತದಲ್ಲಿರುವ ಎಸಿಬಿ ಸಂಸ್ಥೆ ರೂಪಿಸಿ, ಆಟವಾಡುತ್ತಿದ್ದಾರೆ ಎಂದು ನಾಗರತ್ನ ಕುಪ್ಪಿ ಆರೋಪಿಸಿದರು.
ಸ್ಥಳೀಯ ಗುರುಮಠಕಲ್ ಶಾಸಕರಿಗೂ ಈ ಭಾಗದ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ.
ಸಚಿವ ಸ್ಥಾನ ಕಳಕೊಂಡ ಮೇಲೆ ಅವರು ಅದರ ಹುಡುಕಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರೈತರ ಸಮಸ್ಯೆ, ನಾಗರಿಕರ ದೂರುಗಳಿಗೆ ಸೂಕ್ತ ಸ್ಪಂಧನೆ ಇಲ್ಲ ಎಂದು ದೂರಿದರು.
Super sir