ಪ್ರಮುಖ ಸುದ್ದಿ
#Just Asking ಹೆಸರಿನಲ್ಲಿ ಪ್ರಕಾಶ್ ರೈ ಪ್ರತಿಭಟನೆ!
ಸಂಸದ ಪ್ರತಾಪ್ ಸಿಂಹಗೆ ಲಾಯರ್ ನೋಟಿಸ್ ನೀಡಿದ ಪ್ರಕಾಶ್ ರೈ
ಮೈಸೂರು: ನನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆ ಆಗುವಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮತ್ತು ಫೇಸ್‍ಬುಕ್ ಟ್ರೋಲ್ ಮಾಡಿದ್ದಾರೆ. ಮಗನ ಸಾವಿನ ಸುದ್ದಿ, ಪತ್ನಿಯ ವಿಷಯ ಸೇರಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನನ್ನನ್ನು ರೀಯಲ್ ಲೈಫ್ ನಲ್ಲೂ ಖಳನಾಯಕ ಎಂದಿದ್ದು ತಮಿಳುನಾಡಿಗೆ ಹೋಗುವಂತೆ ಟ್ರೋಲ್ ಮಾಡುವ ಮೂಲಕ ಟ್ರೋಲ್ ಗುಂಡಾಗಿರಿ ಪ್ರದರ್ಸಿಸಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ just asking ಹೆಸರಿನಲ್ಲಿ ಪ್ರತಿಭಟನೆ ಆರಂಭಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಂಸದ ಪ್ರತಾಪ ಸಿಂಹ ಅವರಿಗೆ ಮೊದಲು ಲಾಯರ್ ನೋಟಿಸನ್ನು ನೀಡಿದ್ದೇನೆ. ಇದು ಯಾವುದೇ ಪಕ್ಷದ ವಿರುದ್ಧ ಅಲ್ಲ, ನನ್ನ ಮಗನ ಸಾವನ್ನು ಅಣಕ ಮಾಡಿ ನನ್ನ ಬಗ್ಗೆ ಅವಹೇಳನಕಾರಿ ಟ್ರೋಲ್ ಮಾಡಿದ ವ್ಯಕ್ತಿಯ ವಿರುದ್ಧ ಅಷ್ಟೇ. ಇದೆಲ್ಲಾ ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ನೋಟಿಸ್ ನಲ್ಲಿ ರೈ ಪ್ರಶ್ನಿಸಿದ್ದಾರೆ.