ಮದ್ಯಪಾನ ನಿಷೇಧ ಮಾಡುತ್ತಾ ಸಿದ್ದು ಸರ್ಕಾರ :ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದೇನು?
ಮಾನಸಿಕವಾಗಿ ಸಿದ್ಧಗೊಳಿಸಿ ಮದ್ಯಪಾನ ನಿಷೇಧದ ಗುರಿ
ಮೈಸೂರು: ರಾಜ್ಯದಲ್ಲೂ ಮದ್ಯಪಾನ ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಮಠಾಧೀಶರು ಸೇರಿದಂತೆ ಅನೇಕ ಗಣ್ಯರು ಮದ್ಯಪಾನ ನಿಷೇದಸಿಸುವಂತೆ ಹೇಳುತ್ತಿದ್ದಾರೆ. ಹೀಗಾಗಿ, ಮದ್ಯಪಾನ ನಿಷೇಧದ ಬಗ್ಗೆ ತೀವ್ರವಾದ ಪರ- ವಿರೋಧ ಚರ್ಚೆಗಳೂ ಶುರುವಾಗಿವೆ. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮದ್ಯಪಾನ ನಿಷೇಧಿಸಬೇಕೆಂಬ ಚಿಂತನೆ ನಮ್ಮ ಸರ್ಕಾರದ ಮುಂದಿದೆ. ಆದರೆ, ಏಕಾಏಕಿ ಮದ್ಯಪಾನ ನಿಷೇಧ ಮಾಡುವುದು ಕಷ್ಟಸಾಧ್ಯ. ಮದ್ಯಪಾನ ನಿಷೇಧಕ್ಕೆ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಿದ ನಂತರ ಮಧ್ಯಪಾನ ನಿಷೇಧಿಸುವ ಗುರಿಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮದ್ಯಪಾನ ಸಂಯಮ ಮಂಡಳಿ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ಮೂಲಕ ಜನಜಾಗೃತಿ ಮೂಡಿಸಿದ ಮದ್ಯಪಾನ ನಿಷೇಧಿಸಬೇಕಾಗುತ್ತದೆ ಎಂದು ಸಚಿವ ತಿಮ್ಮಾಪುರ ತಿಳಿಸಿದರು.
ಮದ್ಯಪಾನ ನಿಷೇಧದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಚಿಂತನೆ ನಡೆಸಿದ ಬಳಿಕ ನಿಷೇಧದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕೇರಳ, ಆಂಧ್ರ ಪ್ರದೇಶದಲ್ಲಿ ಏಕಾಏಕಿ ಮದ್ಯಪಾನ ನಿಷೇಧದಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿ ಆಗಿವೆ. ಆದರೂ, ಜನರ ಆರೋಗ್ಯದ ದೃಷ್ಟಿಯಿಂದ ಮದ್ಯಪಾನ ನಿಷೇಧಿಸಬೇಕಿದೆ ಎಂದು ಹೇಳುವ ಮೂಲಕ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮದ್ಯಪಾನ ನಿಷೇಧದ ಪರ ಒಲವು ತೋರಿದ್ದಾರೆ.