ಪ್ರಮುಖ ಸುದ್ದಿ
ಯಾದಗಿರಿ: ಆಟೋಗೆ ಲಾರಿ ಡಿಕ್ಕಿ, ಓರ್ವ ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ
ಸುರಪುರದ ಕವಡಿಹಟ್ಟಿ ಬಳಿ ಸಂಭವಿಸಿದ ಅಪಘಾತ!
ಯಾದಗಿರಿ: ಸುರಪುರ ತಾಲೂಕಿನ ಕವಡಿಹಟ್ಟಿ ಗ್ರಾಮದ ಸಮೀಪ ಆಟೋಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಆಟೋದಲ್ಲಿದ್ದ ಕುಂಬಾರಪೇಟೆ ಗ್ರಾಮದ ಅಯ್ಯಮ್ಮ ಐಕೂರು(35) ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದಲ್ಲಿ ಆಟೋದಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಲಾರಿಯ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ಪೊಲೀಸರ ತನಿಖೆಯಿಂದ ಅಪಘಾತದ ನಿಖರ ಕಾರಣ ತಿಳಿದು ಬರಬೇಕಿದೆ.