ರಕ್ತದಾನ ಮಾಡಿ ಪ್ರಾಣ ರಕ್ಷಣೆಗೆ ಮುಂದಾಗಿಃ ಡಾ.ಶೈಲಜಾ ಶರಣಭೂಪಾಲರಡ್ಡಿ
ಶಹಾಪುರಃ ವಿಶ್ವ ಏಡ್ಸ್ ದಿನಾಚರಣೆ, ರಕ್ತದಾನ ಶಿಬಿರ
ಶಹಾಪುರಃ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯ ವೃದ್ಧಿ ಜೊತೆಗೆ ಇನ್ನೊಬ್ಬರನ್ನು ಪ್ರಾಣಪಾಯದಿಂದ ಪಾರಾಗಲು ಸಹಕರಿಸಿದ ಫಲ ದೊರೆಯಲಿದೆ ಎಂದು ಡಾ.ಶೈಲಜಾ ಶರಣಭೂಪಾಲರಡ್ಡಿ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಚಾರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನದಿಂದ ನಂದಿ ಹೋಗುವ ಜೀವಕ್ಕೆ ಮರು ಜೀವ ದೊರೆಯಲಿದೆ. ಆಗ ರಕ್ತ ನೀಡಿದ ದಾನಿಗಳಿಗೆ ಅದರಿಂದ ಪುಣ್ಯ ಲಭಿಸಲಿದೆ ಎಂದರು.
ಯಾದಗಿರಿ ಜಿಲ್ಲಾ ಅಂಧತ್ವ ನಿವಾರಣ ಅಧಿಕಾರಿ ಡಾ.ಜಗಧೀಶ ಉಪ್ಪಿನ್ ಮಾತನಾಡಿ, ಮತ್ತೊಬ್ಬರಿಗೆ ರಕ್ತದಾನ ಮಾಡುವುದರಿಂದ ಅವರ ಮೈಯಲ್ಲಿ ಹರಿಯುವ ರಕ್ತದ ನೆನಪು ಹಜರಾಮರಾಗಿ ಉಳಿಯಲಿದೆ. ಇದೊಂದು ಸುಮಧುರ ಬಾಂಧ್ಯವ್ಯದ ಬೆಸುಗೆಯಾಗಲಿದೆ. ರಕ್ತದಾನದಿಂದ ದಾನಿಯ ಆರೋಗ್ಯವು ವೃದ್ಧಿಯಾಗಲಿದೆ. ಪ್ರತಿಯೊಬ್ಬರು ತಮ್ಮ ದೇಹದ ಆರೋಗ್ಯಕ್ಕಾಗಿ ಹನಿ ರಕ್ತ ನೀಡಿ ಸಹಕರಿಸಿದಲ್ಲಿ ಅನೂಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಉಪ್ಪಿನವರು ತಮ್ಮ 45 ನೇಯ ಜನ್ಮ ದಿನದ ಅಂಗವಾಗಿ ರಕ್ತದಾನಿಗಳಿಗೆ ಅಲ್ಪ ಉಪಾಹಾರ ವ್ಯವಸ್ಥೆ ಮಾಡಿದ್ದರು.
ಸರ್ಕಾರಿ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಮೇಶ ಗುತ್ತೇದಾರ, ಡಾ.ವೆಂಕಟೇಶ ಬೈರವಾಡಿಗಿ, ಡಾ.ಶರಣರಡ್ಡಿ, ಡಾ.ಮಹೇಶರಡ್ಡಿ, ಡಾ.ರಾಘವೇಂದ್ರ, ಡಾ.ಗಂಗಾಧರ ಚಟ್ರಕಿ ಸೇರಿದಂತೆ ರಕ್ತ ಕೇಂದ್ರದ ರಾಚನಗೌಡ, ಗುಂಡುರಾವ್, ಸಹಾಯಕ ಸಿಬ್ಬಂದಿ ವೆಂಕಟಲಕ್ಷ್ಮೀ, ಉದಯಕುಮಾರಿ, ಯಶೋದಾ, ಅಮೃತಲಾಲ ಜೈನ ಸೇರಿದಂತೆ ಇತರರಿದ್ದರು.