ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ಪೂರಕ ದಾಖಲೆ ಬಿಡುಗಡೆಃ ಸಚಿವ ಎಂ.ಬಿ.ಪಾಟೀಲ್
ಡಿ.10 ರಂದು ವಿಜಯಪುರದಲ್ಲಿ ಲಿಂಗಾಯತ ಜಾಗೃತಿ ಸಮಾವೇಶ
ವಿಜಯಪುರಃ ಬರುವ ಡಿ.10 ರಂದು ವಿಜಯಪುರದಲ್ಲಿ ಲಿಂಗಾಯತ ಜಾಗೃತಿ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ಡಾ.ಅಂಬೇಡ್ಕರ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಸವ ಜನ್ಮಭೂಮಿಯಲ್ಲಿ ಲಿಂಗಾಯತರಲ್ಲಿ ಜಾಗೃತಿ ಮೂಡಿಸುವ ಸಮಾವೇಶ ಇದಾಗಲಿದ್ದು, ಅಂದು ಪಿಂಗಾಯತ ಧರ್ಮದ ಪ್ರತ್ಯೇಕತೆಗೆ ಬೇಕದ ಪೂರಕ ದಾಖಲಾತಿಗಳನ್ನು ಬಿಡುಗಡೆಗೊಳಿಸಲಾಗುವುದು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾರ ಪರವು ಅಲ್ಲ ವಿರೋಧವು ಅಲ್ಲ ಎಂದ ಅವರು,
ವೀರಶೈವರನ್ನು ನಮ್ಮೊಡನೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದೇವೆ. ಇಲ್ಲವಾದರೆ ವೀರಶೈವ ಸ್ವತಂತ್ರ ಧರ್ಮ ಕೇಳಿದರೂ ಆಕ್ಷೇಪವಿಲ್ಲ ಎಂದು ತಿಳಿಸಿದರು.
ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸೂಕ್ತ ದಾಖಲಾತಿಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ ಲಿಂಗಾಯತ ಪ್ರತ್ಯೇಕವಾಗುವುದು ಖಂಚಿತವೆಂದರು.
ಈ ಸಂದರ್ಭದಲ್ಲಿ ಇಳಕಲ್ ಮಹಾಂತಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮಿ, ಬೆಳಗಾವಿಯ ನಾಗನೂರ ಸ್ವಾಮೀಜಿ, ಚಿತ್ರದುರ್ಗಾ ಮುರುಘಾ ಶರಣರು ಸೇರಿದಂತೆ ಇತರರು ಉಪಸ್ಥಿತರಿದ್ದರು,