ಪ್ರಮುಖ ಸುದ್ದಿ
ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿಗೆ ಎಐಸಿಸಿ ಅದ್ಯಕ್ಷ ಪಟ್ಟ!
ದೆಹಲಿ: ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಚುನಾವಣ ಸಮಿತಿಯ ರಿಟರ್ನಿಂಗ್ ಆಫಿಸರ್ ಎಂ.ರಾಮಚಂದ್ರನ್ ಇಂದು ರಾಹುಲ್ ಗಾಂಧಿ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎಐಸಿಸಿ ಅದ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ವಿರುದ್ಧ ಯಾರೊಬ್ಬರೂ ಸ್ಪರ್ದೆಗೆ ಅರ್ಜಿ ಸಲ್ಲಿಸಿಲ್ಲವಾದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಮಚಂದ್ರನ್ ತಿಳಿಸಿದ್ದಾರೆ.
ನೆಹರೂ-ಗಾಂಧಿ ಕುಟುಂಬದಿಂದ ಕಾಂಗ್ರೆಸ್ ಪಕ್ಷದ ಅದ್ಯಕ್ಷರಾದವರ ಪೈಕಿ ರಾಹುಲ್ ಗಾಂಧಿ ಆರನೇ ಅದ್ಯಕ್ಷರಾಗಿದ್ದಾರೆ. ಪ್ರಥಮ ಬಾರಿಗೆ ಮೋತಿಲಾಲ್ ನೆಹರು ಅದ್ಯಕ್ಷರಾಗಿದ್ದರು. ಬಳಿಕ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅದ್ಯಕ್ಷರಾಗಿದ್ದರು.