ಪ್ರಮುಖ ಸುದ್ದಿ
‘ಶಹಾಪುರದಲ್ಲಿ ಬಿಜೆಪಿ ಯಾತ್ರೆಗೆ ಜನಜಾತ್ರೆ, ಕಾಂಗ್ರೆಸ್ಸಿಗರಿಗೆ ನಡುಕ!’
ಶಹಾಪುರ: ಶಹಾಪುರ ಮತಕ್ಷೇತ್ರದ ಬಿಜೆಪಿ ಶಾಸಕ ಗುರುಪಾಟೀಲ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಯಶಸ್ವಿಯಾಗಿದೆ. ಶಹಾಪುರದಲ್ಲಿ ನಡೆದ ಬಿಜೆಪಿಯ ಈ ಸಮಾವೇಶದಲ್ಲಿ ಜನ ಜಾತ್ರೆಯೇ ಸೇರಿದೆ. ಬಿಜೆಪಿಗೆ ಬೆಂಬಲವಾಗಿರುವ ಜನರ ಜಾತ್ರೆ ನೋಡಿ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ ಎಂದು ಬಳ್ಳಾರಿ ಸಂಸದ, ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದಾರೆ.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಭಾಗಿಯಾಗಿದ್ದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಶಾಸಕರಾದ ಸಿ.ಟಿ.ರವಿ, ಗುರು ಪಾಟೀಲ್, ಮಾಜಿ ಸಚಿವ ರಾಜುಗೌಡ, ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮಾತೆಪ್ಪ ಕಂದಕೂರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.