ಡಿ.17 ರಂದು ಸಿಎಂ ಆಗಮನಃ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಂದ ಸ್ಥಳ ಪರಿಶೀಲನೆ
ಯಾದಗಿರಿಃ ಇದೇ ಡಿ.17 ರಂದು ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ಡಿಗ್ರಿ ಕಾಲೇಜು ಮೈದಾನದಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅಂದು ಸಿಎಂ ಸಿದ್ರಾಮಯ್ಯನವರು ಆಗಮಿಸುತ್ತಿರುವದರಿಂದ, ಗುರುವಾರ ಸಂಜೆ ಕಾರ್ಯಕ್ರಮದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿಗಳು ಡಿ.17 ಮದ್ಯಾಹ್ನ ಆಗಮಿಸಲಿದ್ದು, ಸೂಕ್ತ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಮತ್ತು ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಮೂಲಕ ಆಗಮನ ಹಿನ್ನೆಲೆಯಲ್ಲಿ, ಸಮೀಪದ ಭೀಮರಾಯನ ಗುಡಿ ಹೆಲಿಪ್ಯಾಡ್ ಸಹ ಪರಿಶೀಲನೆ ನಡೆಸಿದರು. ಅಂದು ಕಾರ್ಯಕರ್ತರಿಗೂ ಸೂಕ್ರ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಬಂದೋ ಬಸ್ತ್ ಕುರಿತು ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಮತ್ತು ಸ್ಥಳೀಯ ಮುಖಂಡರು ಸಮರ್ಪಕ ವ್ಯವಸ್ಥೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ ಮುಂಜಾಗೃತವಾಗಿ ಕ್ರಮಕೈಗೊಳ್ಳಲು ತಿಳಿಸಿದರು.
ಊಟ ನೀರಿನ ವ್ಯವಸ್ಥೆ ಸೇರಿದಂತೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟೀನ್ ಮಾರ್ಬನ್ಯಾಂಗ್, ತಹಸೀಲ್ದಾರರು ಸೇರಿದಂತೆ ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಮುಖಂಡರಾದ ಚಂದ್ರಶೇಖರ ಆರಬೋಳ, ಮರಿಗೌಡ ಹುಲಕಲ್, ಕೆಂಚಪ್ಪ ನಗನೂರ ಸೇರಿದಂತೆ ಇತರರು ಹಾಜರಿದ್ದರು.