ಪ್ರಮುಖ ಸುದ್ದಿ
ಪತ್ತೆಯಾದ ‘ಮಜಾರ್’ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಸುವಾಸನೆ ಬೀರುವ ಮಣ್ಣು ಪರಿಶೀಲನೆಗೆ ರವಾನೆ
ಶಹಾಪುರಃ ನಗರದಲ್ಲಿ ಭೂಮಿ ಅಗೆಯುವಾಗ ಪತ್ತೆಯಾದ ‘ಗೋರಿ’ ಸ್ಥಳಕ್ಕೆ ತಾಲೂಕು ಆಡಳಿತ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುವಾಸನೆ ಬೀರುವ ಮಣ್ಣನ್ನು ಪಡೆದುಕೊಂಡು ಪ್ರಾಚ್ಯವಸ್ತು ಸಂಗ್ರಹ ಇಲಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಸ್ಥಳದಲ್ಲಿ ಪತ್ತೆಯಾದ ‘ಮಜಾರ್’ ಕುರಿತು ಸಮರ್ಪಕ ವರದಿ ತಯಾರಿಸಿ ಪ್ರಾಚ್ಯವಸ್ತು ಇಲಾಖೆಗೆ ಕಳುಹಿಸಲಾಗಿದೆ ಎಂದು ಭೇಟಿ ನೀಡಿದ ಕಂದಾಯ ನಿರೀಕ್ಷಕ ಸಂಗಮೇಶ ದೇಸಾಯಿ ತಿಳಿಸಿದ್ದಾರೆ.
ಮಜಾರ್ ಪತ್ತೆ ಕುರಿತು “ವಿನಯವಾಣಿ” ನಿರಂತರ ವರದಿ ಪ್ರಕಟಿಸಿದೆ. ಅಲ್ಲದೆ ನಿನ್ನೆ ಲೇಖನದಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿಲ್ಲ. ‘ಗೋರಿ’ ಕುರಿತು ಹಲವು ವಿಚಿತ್ರ ಸುದ್ದಿಗಳು ಹರಡುತ್ತಿದ್ದು, ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಲಿ ಎಂದು ವರದಿ ಪ್ರಕಟಿಸಲಾಗಿತ್ತು.