ಪ್ರಮುಖ ಸುದ್ದಿ

ತೆಲಂಗಾಣ ಶಾಸಕ ಪ್ರಚೋದನಕಾರಿ ಭಾಷಣ : ಪ್ರಕರಣ ದಾಖಲು

ಯಾದಗಿರಿ: ಇದೆ 12 ರಂದು ತೆಲಂಗಾಣದ ಗೋಶಾಮಲ್ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರು ಅವರು ಯಾದಗಿರಿ ನಗರದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಪ್ರಚೋದನಾ ಕಾರಿ ಭಾಷಣ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಟ್ ಹಿಂದು ಸಮಾವೇಶದಲ್ಲಿ ವಿವಿಧ ಮಠಾಧೀಶರು, ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಾಸಕ ರಾಜಾಸಿಂಗ್ ಭಾಗಿಯಾಗಿ ಪ್ರಚೋದನಾ ಕಾರಿ ಭಾಷಣ ಮಾಡಿ ಕೋಮುಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ.ಈಗಾಗಲೇ ರಾಜ್ಯದ ಕರಾವಳಿ ಭಾಗದಲ್ಲಿ ಕೋಮುದಳ್ಳುರಿ ಘಟನೆ ಜರುಗಿ ಕೋಮು ಭಾವನೆ ಕದಡಿದೆ.ಈ ಘಟನೆ ನಂತರ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಶಾಸಕ ರಾಜಾಸಿಂಗ್ ಠಾಕೂರು ಅವರು ಕೋಮುಭಾವನೆ ಕದಡುವ ಜೊತೆ ಹಿಂದುಗಳು ಪ್ರತಿಯೊಬ್ಬರು ಮನೆಯಲ್ಲಿ ಖಡ್ಗ ಇಟ್ಟುಕೊಳ್ಳಬೇಕೆಂದು ಕರೆ ನೀಡಿದ್ದರು.

ಅದೆ ರೀತಿ ಕಾರ್ಯಕ್ರಮದಲ್ಲಿ ಶಾಸಕನ ಮಾತಿಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಖಡ್ಗ ಪ್ರದರ್ಶನ ಮಾಡಿದರು.ಮತ್ತು ಕೆಲ ಶ್ರೀರಾಮ ಸೇನೆ ಕಾರ್ಯಕರ್ತರು ಶಾಸಕ ರಾಜಾಸಿಂಗ್ ಗೆ ಖಡ್ಗ ಕಾಣಿಕೆ ನೀಡಿದ್ದರು .ಈ ವೇಳೆ ಶಾಸಕ ರಾಜಾಸಿಂಗ್ ಖಡ್ಗ ಪ್ರದರ್ಶನ ಮಾಡಿದರು.

ಶಾಸಕ ರಾಜಾಸಿಂಗ್ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲು: ಇದೆ 12 ರಂದು ಶಾಸಕ ರಾಜಾಸಿಂಗ್ ಪ್ರಚೋದನೆ ಭಾಷಣ ಮಾಡಿದ ಪ್ರಕರಣ ಸಂಬಂಧಪಟ್ಟಂತೆ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 143,145,147,149,25(1) ಅಡಿ ನಗರ ಠಾಣೆ ಪೊಲೀಸರು ಸ್ವಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಶಾಸಕ ರಾಜಾಸಿಂಗ್ ಠಾಕೂರು,ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್,ಶ್ರೀರಾಮ ಸೇನೆ ಗೌರವಾಧ್ಯಕ್ಷ ಅಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿ,ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಹಾಗೂ ಇನ್ನಿತರ ವಿರುದ್ದ ಪ್ರಕರಣ ದಾಖಲಾಗಿದೆ.

ತಡವಾಗಿ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನು ಮುಂದೆ ಸರಕಾರ ಪ್ರಚೋದನಾ ಕಾರಿ ಹೇಳಿಕೆ ನೀಡುವ ಇಂತಹ ನಾಯಕರಿಗೆ ರಾಜ್ಯದಲ್ಲಿ ನಿಷೇಧ ಮಾಡಿ ರಾಜ್ಯದಲ್ಲಿ ಶಾಂತಿ ನೆಲೆಸುವ ಕೆಲಸ ಸರಕಾರ ಮಾಡಬೇಕಿದೆ.

ತನೀಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಐಜಿಪಿ: ವಿರಾಟ್ ಹಿಂದು ಸಮಾವೇಶದಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್ ಪ್ರಚೋದನಾತ್ಮಕ ಭಾಷಣ ಪ್ರಕರಣ ಸಂಬಂಧಪಟ್ಟಂತೆ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಮಾತನಾಡಿ, ವಿವದಾತ್ಮಕ ಹೇಳಿ ಹಾಗೂ ಖಡ್ಗ ಪ್ರದರ್ಶನ ಮಾಡಿದ್ದು ಪರಿಶೀಲನೆ ಮಾಡಲಾಗುತ್ತದೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡೆ ಪ್ರಕರಣ ದಾಖಲಿಸಲಾಗಿದೆ.ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.ಈ ಬಗ್ಗೆ ತನೀಖೆ ನಡೆಸಿ ತಪ್ಪಿತಸ್ಥರು ಯಾರೆ ಇದ್ದರು ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button