ಗುಜರಾತ್ ಗೆಲುವಿಗಾಗಿ ರಾಹುಲ್ ಗಾಂಧಿ ಮನೆ ಬಳಿ ಹೋಮ ಹವನ!
ದೆಹಲಿ: ಗುಜರಾತ್ ಚುನಾವಣೆಯತ್ತ ಇಡೀ ದೇಶದ ದೃಷ್ಟಿ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಇಬ್ಬರಿಗೂ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮದ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎನ್ನಲಾಗಿದೆ. ಮತ್ತೊಂದುಕಡೆ ಕಾಂಗ್ರೆಸ್ ಪಕ್ಷ ಕೂಡ ತೀವ್ರ ಪೈಪೋಟಿ ನೀಡಿದೆ. ಅಲ್ಲದೆ 22ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿಗೆ ಆಡಳಿತ ವಿರೋಧಿ ಅಲೆಯಿದೆ. ಜಿಗ್ನೇಶ್ ಮೆವಾನಿ, ಹಾರ್ದಿಕ್ ಪಟೇಲ್ ರಂಥ ಪವರ್ ಫುಲ್ ಬಾಣಗಳನ್ನು ಬಳಸಿಕೊಂಡಿರುವ ರಾಹುಲ್ ಗಾಂಧಿಯ ಮೈತ್ರಿ ಗುಜರಾತ್ ನಲ್ಲಿ ಫಲನೀಡಲಿದೆ. ಹೀಗಾಗಿ, ಕಾಂಗ್ರೆಸ್ ಪರವಾದ ಅಚ್ಚರಿಯ ಫಲಿತಾಂಶ ಬರಲಿದೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಎಐಸಿಸಿ ನೂತನ ಅದ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಗುಜರಾತ್ ಮಹತ್ವದ ಚುನಾವಣೆ ಆಗಿದೆ. ಹೀಗಾಗಿ, ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಮ್ಯಾಜಿಕ್ ನಂಬರ ಪಕ್ಷಕ್ಕೆ ಲಭಿಸಲಿ ಎಂದು ಕಾರ್ಯಕರ್ತರು ರಾಹುಲ್ ಗಾಂಧಿ ನಿವಾಸದ ಎದುರು ಹೋಮ, ಹವನ ಮಾಡುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಯುವರಾಜನಿಗೆ ಜಯಕಾರ ಹಾಕುತ್ತಿದ್ದಾರೆ.
ಈ ಹಿಂದೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗಲೆಲ್ಲಾ ರಾಹುಲ್ ಹಠಾವೋ ಪ್ರಿಯಾಂಕಾ ಲಾವೋ ಘೋಷಣೆ ಮೊಳಗಿಸುತ್ತಿದ್ದ ಕಾರ್ಯಕರ್ತರು ಈಗ ಫಲಿತಾಂಶಕ್ಕೂ ಮೊದಲೇ ಎಐಸಿಸಿ ಅದ್ಯಕ್ಷರಾಗಿರುವ ರಾಹುಲ್ ಪರ ಬ್ಯಾಟಿಂಗ್ ಗೆ ಇಳಿದಿದ್ದಾರೆ. ಆದರೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಕೈ ಪಾಲಾಗಲಿದೆಯೇ ಅಥವಾ ಕಮಲದ ಹಿಡಿಯಲಿದೆಯೇ ಎಂಬುದು ಮದ್ಯಾನದ ಹೊತ್ತಿಗೆ ಸ್ಪಷ್ಟವಾಗಲಿದೆ.