ಪ್ರಮುಖ ಸುದ್ದಿ
ವೀರಶೈವ ಲಿಂಗಾಯತ ಸಮಾವೇಶ : ‘ಲಿಂಗಾಯತ’ ಸಚಿವರಿಗೆ ತಕ್ಕಪಾಠ ಕಲಿಸಲು ಉಜ್ಜಯನಿ ಜಗದ್ಗುರು ಕರೆ
ಗದಗ: ನಮ್ಮನ್ನು ಒಡೆದು ಆಳುವ ನೀತಿಗೆ ಯಾರೂ ಧ್ವನಿಗೂಡಿಸಬಾರದು. ಕೆಲ ಸಚಿವರು ತಮ್ಮ ಪ್ರತಿಗ್ನಾವಿಧಿ ಮರೆತು ಸಮಾಜವನ್ನು ಒಡೆಯುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಥವರಿಗೆ ಜನರೇ ತಕ್ಕ ಪಾಠ ಕಲಿಸಬೇಕೆಂದು ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಉಜ್ಜಯನಿ ಜಗದ್ಗುರುಗಳು ಮಾತನಾಡಿದರು. ವೀರಶೈವರು ಆಲದ ಮರವಿದ್ದಂತೆ. ಶತಮಾನಗಳಿಂದಲೂ ಎಲ್ಲರಿಗೂ ಅನ್ನ ಮತ್ತು ಆಶ್ರಯ ನೀಡಿದ್ದೇವೆ ಎಂದರು. ಇದೇ ವೇಳೆ ವೀರಶೈವ ಲಿಂಗಾಯತರಿಗೆ ಪ್ರತಿಗ್ನಾವಿಧಿ ಬೋಧಿಸಿದ ಜಗದ್ಗುರುಗಳು ಸಾಮರಸ್ಯ, ಸಮನ್ವಯತೆಯಿಂದ ಸಹಬಾಳ್ವೆ ನಡೆಸುತ್ತೇವೆಂದು ಪ್ರತಿಗ್ನೆ ಮಾಡಿಸಿದರು.