ಪ್ರಮುಖ ಸುದ್ದಿ
ಶಿವಾಜಿ ಗಣೇಶನ್, ಎನ್ ಟಿ ಆರ್ ಸೇರಿದರೆ ಡಾ.ರಾಜಕುಮಾರ್ – ರಜನೀಕಾಂತ್
ಚನ್ನೈ: ಕರುನಾಡಿನ ಕಲಾರಸಿಕರ ಆರಾಧ್ಯದೈವ, ಕರ್ನಾಟಕದ ರಾಜಕುಮಾರ, ಮೇರುನಟ ಡಾ.ರಾಜಕುಮಾರ್ ನನ್ನ ಪಾಲಿನ ಆದರ್ಶ. ಖ್ಯಾತ ನಟರಾದ ಶಿವಾಜಿ ಗಣೇಶನ್ ಮತ್ತು ಎನ್ ಟಿ ಆರ್ ಇವರಿಬ್ಬರ ವ್ಯಕ್ತಿತ್ವ ಸೇರಿದ ವ್ಯಕ್ತಿತ್ವ ರಾಜಕುಮಾರ್ ಆವರದ್ದು. ಅಂಥ ಅಪರೂಪದ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ನಾನು ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
ಚನ್ನೈನ ಟಿ.ನಗರದಲ್ಲಿ ನಡೆತುತ್ತಿರುವ ನಟ ರಜನೀಕಾಂತ ಅಭಿಮಾಬಿಗಳ ಸಭೆಯ ಮೂರನೇ ದಿನ ಕಾರ್ಯಕ್ರಮದಲ್ಲಿ ನಟ ರಜನೀಕಾಂತ ಅವರು ರಾಜಕುಮಾರ್ ಬಗೆಗಿನ ಅಭಿಮಾನದ ಮಾತುಗಳನ್ನು ಹಾಡಿದ್ದಾರೆ. ರಾಜಕುಮಾರ್ ಅವರ ಪಾದಸ್ಪರ್ಶಿಸಿ ನಮಿಸಲು ಕಾದು ಕೂಡುತ್ತಿದ್ದೆ ಅದು ಅವಿಸ್ಮರಣೀಯ. ಬೆಂಗಳೂರಿನಲ್ಲಿ ರಾಜಕುಮಾರ್ ಅವರಿಗಾಗಿ ಕಾದು ಕುಳಿತು ಭೇಟಿ ಆಗುವುದರಲ್ಲಿ ಒಂಥರಾ ಥ್ರಿಲ್ ಇತ್ತು ಎಂದು ನಟ ರಜನೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಕನ್ನಡದ ಕಣ್ಮಣಿ ರಾಜಕುಮಾರ್ ಅವರ ಗುಣಗಾನ ಮಾಡಿದ್ದು ರಜನೀಕಾಂತ ಅವರ ಉತ್ತಮ ವ್ಯಕ್ತಿತಕ್ಕೆ ಹಿಡಿದ ಕೈಗನ್ನಡಿ.