ಪ್ರಮುಖ ಸುದ್ದಿ
‘ಲವ್ ಜಿಹಾದ್’ ವಿರುದ್ಧ ಜನಜಾಗೃತಿ ಅಭಿಯಾನ!
ಮಂಗಳೂರು: ವಿಶ್ವ ಹಿಂದೂ ಪರಿಷತ್ , ದುರ್ಗಾ ವಾಹನಿ ಹಾಗೂ ಬಜರಂಗದಳದ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ‘ಲವ್ ಜಿಹಾದ್’ ಅಭಿಯಾನ ಆರಂಭಿಸಿವೆ. ನಗರದ ಪಿವಿಎಸ್ ವೃತ್ತ ಸಮೀಪದ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಶಿಷ್ಟ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಹದಿನೈದು ದಿನಗಳ ಕಾಲ ಬೃಹತ್ ಜನಜಾಗೃತಿ ಅಭಿಯಾನ ನಡೆಯಲಿದೆ. ವಿವಿಧ ಶಾಲಾ, ಕಾಲೇಜು ಮತ್ತಿತರೆ ಸಂಸ್ಥೆ ಹಾಗೂ ಮನೆ ಮನೆಗೆ ತೆರಳಿ ಜಾಗೃತಿಯ ಕರಪತ್ರ ಹಂಚುವ ಮುಖಾಂತರ ಜಾಗೃತಿ ಅಭಿಯಾನ ನಡೆಸುವುದು. ಪ್ರತಿ ಗ್ರಾಮದಲ್ಲಿ ಸಮಿತಿ ರಚಿಸಿ ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಲವ್ ಜಿಹಾದ್ ಗೆ ಕಡಿವಾಣ ಹಾಕುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.