ಈಶ್ವರಸಿಂಗ್ ಠಾಕೂರ ಬೀದರ ಉತ್ತರ ಅಭ್ಯರ್ಥಿ..?
ಅಮಿತ್ ಶಾ – ಈಶ್ವರಸಿಂಗ್ ಠಾಕೂರ ಭೇಟಿ
ಮಲ್ಲಿಕಾರ್ಜುನ ಮುದನೂರ
ಬೀದರಃ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡ ಹೈದ್ರಾಬಾದ್ಗೆ ಹೋಗಿ ಮುಸ್ಲಿಂವಾದಿ ಓವೈಸಿಗೆ ನೀರು ಇಳಿಸಿ ಬಂದಿದ್ದ, ಕಟ್ಟಾ ಹಿಂದೂವಾದಿಯಂತಲೇ ಗುರುತಿಸಿಕೊಂಡ ಈಶ್ವರ ಸಿಂಗ್ ಠಾಕೂರ್ ಈ ಬಾರಿ ಬಹುತೇಕ ಬೀದರ ಉತ್ತರದಿಂದ ಸ್ಪರ್ಧೀಸುವ ಸಾಧ್ಯತೆ ಹೆಚ್ಚಿದೆ ಎಂದು ಅವರ ಒಡನಾಡಿಗಳಿಂದ ತಿಳಿದು ಬಂದಿದೆ.
ಈಶ್ವರಸಿಂಗ್ ಜನಪರ ನಾಯಕರಾಗಿ ಸಮಾಜಮುಖಿ ಕೆಲಸಗಳಲ್ಲಿ ಕಳೆದ ಮೂರು ದಶಕಗಳಿಂದಲೂ ದುಡಿಯುತ್ತಾ ಬಂದಿದ್ದಾರೆ. ಹೈದ್ರಾಬಾದ್ ಪ್ರಾಂತ್ಯಗಳಲ್ಲಿ ಹೆಸರುವಾಸಿಯಾಗಿದ್ದು, ಹಿಂದೂಪರ ಸಂಘಟನೆಯ ಪ್ರತಿಯುವಕರಿಗೂ ಈಶ್ವರಸಿಂಗ್ ಠಾಕೂರ ಅಂದ್ರೆ ಬಲು ಇಷ್ಟ. ಅಂತಹ ಗಟ್ಟಿ ನಾಯಕರೂ ಹೌದು.
ಬೀದರನಲ್ಲಿ ಸಾಕಷ್ಟು ಜನಪರ ಹೋರಾಟ ಧಾರ್ಮಿಕ ಕಾರ್ಯಕ್ರಮಗಳ ಸಂಯೋಜಿಸುವ ಮೂಲಕ ಹಿಂದೂ ಜನರಪವಾಗಿ ಬೆಳೆದು ಬಂದಿರುವ ವ್ಯಕ್ತಿ.
ಕಳೆದ ಬಾರಿ ಬೈಎಲೆಕ್ಷನ್ ನಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗುರುಪಾದಪ್ಪ ನಾಗಮಾರಪಳ್ಳಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಮಗ ಸೂರ್ಯಕಾಂತ ನಾಗಮಾರಪಳ್ಳಿ ಕೊನೆಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ಬಾಲ್ಕಿಯ ಪ್ರಕಾಶ ಖಂಡ್ರೆಯವರಿಗೆ ಬಿಜೆಪಿ ಟಿಕೆಟ್ ನೀಡಲಾಯಿತು. ಆ ಸಂದರ್ಭದಲ್ಲಿ ಇವರು ಪ್ರಬಲ ಪೈಪೋಟಿ ನಡೆಸಿದ್ದರು ಎನ್ನಲಾಗಿದೆ.
ಅಮಿತ್ ಶಾ ದರ್ಶನ-ಠಾಕೂರ ಖುಷ್ ಹೋಗಯಾ.!
ಪ್ರಸ್ತುತ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರನ್ನು ಬೇಟಿ ಮಾಡಿ ಬಂದ ಈಶ್ವರ ಸಿಂಗ್ ಠಾಕೂರ ಈ ಬಾರಿ ಬೀದರ ಉತ್ತರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈಚೆಗೆ ಬೀದರನಲ್ಲಿ ನಡೆದ ಬಿಜೆಪಿ ಪರಿವರ್ತನೆ ಯಾತ್ರೆಯಲ್ಲಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಬೀದರ ಉತ್ತರ ಕ್ಷೇತ್ರದಿಂದ ಕಣಕ್ಕಿಳುಸವ ಮಾತನಾಡಿದ್ದರು ಎನ್ನಲಾಗಿತ್ತು.
ಆದರೆ ಅದೇ ವೇಳೆಗೆ ಅಮಿತ್ ಶಾ ಅವರು, ರಾಜ್ಯ ನಾಯಕರ ಕೈಯಲ್ಲಿ ಟಿಕೆಟ್ ಹಂಚಿಕೆ ಇಲ್ಲ. ಏನಿದ್ದರೂ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತದೆ ಅವರು ಸ್ಪರ್ಧಿಸಬೇಕು ಎಂದು ಖಡಕ್ ಹೇಳಿಕೆ ನೀಡಿರುವದರಿಂದ ಠಾಕೂರ ಅವರು ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ನೋಡಿದರೆ, ಠಾಕೂರ ಅವರು ಬಜೆಪಿ ಟಿಕೆಟ್ಗಾಗಿ ಪ್ರಯತ್ನದಲ್ಲಿದ್ದಾರೆ ಎನಿಸುತ್ತಿದೆ. ಅಮಿತ್ ಶಾ ಅವರು ಠಾಕೂರ ಅವರ ಹಿನ್ನೆಲೆ ಸಂಗ್ರಹಿಸಿದ್ದಾರೆ ಎನ್ನಲಾಗಿದ್ದು, ಭೇಟಿ ಸಂದರ್ಭ ಉತ್ತಮ ಮಾತುಕತೆ ನಡೆದಿದೆ ಎಂದು ಠಾಕೂರ ಬೆಂಬಲಿಗರು ತಿಳಿಸಿದ್ದಾರೆ.
A really Nd Good Leader And Always Ready To help Bidar People Sri Ishwar Singh Thakur Sirji
Nce