ನಾನು ನನ್ನದು ಎನ್ನುವುದು ಯಾವುದಿಲ್ಲ ಈ ಜಗದೊಳುಃ ಸಿದ್ದೇಶ್ವರ ಶ್ರೀಗಳ ಅಮೃತವಾಣಿ
ಜಗತ್ತು ಬ್ರಹ್ಮವಸ್ತುವಿನ ಅಭಿವ್ಯಕ್ತ ರೂಪಃ ಸಿದ್ದೇಶ್ವರಶ್ರೀ ಅಮೃತವಾಣಿ
ಕಲಬುರ್ಗಿಯಲ್ಲಿ ನಡೆಯುತ್ತಿರುವ ಪ್ರವಚನ (ವಿವಿ ಭಾಗ-3)
ಮಲ್ಲಿಕಾರ್ಜುನ ಮುದನೂರ
ಕಲಬುರ್ಗಿಃ ಜಗತ್ತು ಎಷ್ಟು ವಿಸ್ತಾರವಿದೆ ಎಂದರೆ ಅದನ್ನು ಅಳತೆ ಮಾಡಲು ಆಗುವುದಿಲ್ಲ. ಅಲ್ಲದೆ ಅಷ್ಟೆ ವೈವಿದ್ಯತೆಯಿಂದ ಕೂಡಿದೆ ಈ ಜಗತ್ತು. ಇದೆಲ್ಲ ಸಮಸ್ತ ಜಗತ್ತು ಅದ ಅಲ್ಲಾ ಮೂಲ ವಸ್ತುವಿನ ಅಭಿವ್ಯಕ್ತ ರೂಪ. ಬ್ರಹ್ಮವಸ್ತುವಿನ ಅಭಿವ್ಯಕ್ತ ರೂಪ. ಬ್ರಹ್ಮವಸ್ತುವಿನಲ್ಲಿ ಒಂದು ಸಂಕಲ್ಪ ಅದ. ಆ ಪರಿಣಾಮವಾಗಿ ಅದರ ಫಲವಾಗಿ ಇದೊಂದು ಅದ್ಭುತ ಜಗತ್ತು ರೂಪಗೊಂಡಿತು.
ಇದು ಮಹರ್ಷಿಗಳ ಭಾರತೀಯರ ಶ್ರೇಷ್ಠ ದಾರ್ಶನಿಕರ ಚಿಂತನೆ ಇದು. ಅವರು ಜಗತ್ತನ್ನು ನೋಡೆಬಿಟ್ಟರು. ಜಗತ್ತಿನ ವಿಸ್ತಾರವನ್ನು ಗುರುತಿಸಿದರು. ಜಗತ್ತಿನ ವೈಭವವನ್ನು ಅನುಭವಿಸಿದರು. ಜಗತ್ತು ಅಂದ್ರೆ ಸಾಮಾನ್ಯವಾದದು ಅಲ್ಲ. ಎಲ್ಲರಿಗೂ ಜಗತ್ತೇ ಮೂಲ. ನಾವೆಲ್ಲ ಜಗತ್ತಿನ ಮೇಲೆಯೇ ಅವಲಂಬಿತರಾಗಿದ್ದೀವಿ.
ಅದರ ಭಾರ ಮನುಷ್ಯನಿಗೆ ಬಾಳ ಅವಶ್ಯ ಅದು ಇತ್ತಂದ್ರೆ ನಮ್ಮ ಬದುಕು ಸರಳ ಸರಳ ಸಾಗುತ್ತದೆ. ಅದು ಇಲ್ಲಾ ಅಂದ್ರೆ ಭ್ರಮಾ ಜಗತ್ತನ್ನು ಕಟ್ಟುತ್ತೀವಿ. ನಾವೇ ಶ್ರೇಷ್ಠ, ನಮ್ಮನ್ನು ಬಿಟ್ಟು ಜಗತ್ತಿಲ್ಲ ಎಂಬ ಭ್ರಮೆಯಲ್ಲಿ ಮನುಷ್ಯ ಮುಳುಗುತ್ತಾನೆ.
ನಿಮಗೆ ಗೊತ್ತಿರಲಿ ಪ್ರತಿಯೊಂದು ಕ್ಷಣವನ್ನು ನಾವು ಜಗತ್ತಿನ ಮೇಲೆ ಅವಲಂಬಿತರಿದ್ದೀವಿ. ನಮಗೇಣು ಬೇಖು ಅದೆಲ್ಲವೂ ಜಗತ್ತಿನಿಂದಲೇ ಬರಬೇಕು. ನಾವೆಲ್ಲ ಆಸ್ತಿಕರು ಇದೊಂದು ಸಾಗರ. ಸಾಗದೊಳಗ ಒಂದು ಮೀನು ತಿಳಿದುಕೊಂಡದ, ನಾನೇನು ಅದೀನಿ ನನ್ನ ಸುತ್ತಮುತ್ತಲಿರುವದೆಲ್ಲವೂ ನನ್ನದೆ ನಾನೇ ಶ್ರೇಷ್ಠ ಎಂದು ಕಲ್ಪಿಸ್ತದ. ಆದರ ಅದಕ ಗೊತ್ತಿಲ್ಲ ಅದು ಕ್ಷಣ ಕ್ಷಣ ನಾನೇ ಎಲ್ಲಾ ಎಂದು ಭಾವಿಸಿದೆ. ಆದರೆ ಸಾಗರ ಒಂದು ಇರುವದೆಲ್ಲ ಗೊತ್ತಿಲ್ಲ ಅದಕ. ಸಾಗರದಿಂದ ಮೀನು ಹೊರಗ ಹೋಯಿತು ಅದು ಇರಲ್ಲ.
ಹಾಗೇ ಮನುಷ್ಯ ಒಂದು ಸಣ್ಣ ಮೀನು ಇದ್ದಂತೆ. ಮನುಷ್ಯನ ಬುದ್ಧಿ, ಸಾಮಥ್ರ್ಯ ಎಷ್ಟು ಹೇಳಿ. ನಮಗೇನು ತಿಳಿದದ ಅದೇ ಸತ್ಯ ಎಂಬ ಭಾವ ಯಾಕೆ ಬರುತ್ತದೆ. ಅಂದ್ರೆ ನಮ್ಮ ಭ್ರಮೆಯಲ್ಲಿ ನಾವೆಲ್ಲ ಬಾಳುತ್ತಿದೆ ಅದೇ ಕಾರಣ. ಜಗತ್ತಿನಲ್ಲಿ ಅಸಮಧಾನ ಯಾಕೆ. ಹೋರಾಟ ಏಕೆ. ಬದುಕಿನಲ್ಲಿ ಎಷ್ಟು ಪೈಪೋಟಿ ನಡೆಯುತ್ತದೆ ಎಂಬುದನ್ನು ಕಂಡುಕೊಳ್ಳಿ. ಒಂದು ದಿವಸ ಮನುಷ್ಯ ಏರಿ ಏರಿ ಒಂದು ಬೆಟ್ಟದ ತುಟ್ಟತುದಿಯಲ್ಲಿ ನಿಂತು ಹೇಳಿದ ಜಗತ್ತಿನ ಅತಿ ಎತ್ತರದಲ್ಲಿ ನಾನು ಇದ್ದೀನಿ ಅಂದ.
ಅಷ್ಟೊತ್ತಿಗೆ ಅಲ್ಲಿಗೆ ಒಂದು ಪಕ್ಷಿ ಬಂದು ಅವನ ತಲೆ ಮೇಲೆ ಕುಳಿತು ಹೇಳುತ್ತದೆ. ಹೌದು ನೀನೆ ಮೇಲೆ ಇದ್ದೀಯ ನಿನಗಿಂತ ನಾನು ಮೇಲಿದ್ದೇನೆ ಎಂದಿತು.
ಆಗ ಬೆಟ್ಟ ಏರಿದ ಮೇಲೆ ಇಂವ ಎತ್ತರ ಆದರ ಬೆಟ್ಟ ಅವನಿಗೆ ಆಧಾರ ಅಲ್ಲ. ಮೇಲೆ ಏರಿದ ಮೇಲೆ ಅಂವ ಬೆಟ್ಟವನ್ನು ಮರೆತಾನ..
ಜಗತ್ತಿನಲ್ಲಿ ಯಾವ ಸುಂದರ ಯಾವ ಪ್ರಶಸ್ತಿ ಹೆಚ್ಚು ಯಾವುದಿಲ್ಲ. ನಮಗೆ ಬರುವದೆಲ್ಲ ಜಗತ್ತಿನಿಂದಲೇ ಬರುತ್ತದೆ. ಈ ಜಗತ್ತು ನಮಗೆ ಅನ್ನ ಇದ್ದ ಹಾಗೇ. ಅನ್ನದ ಮೇಲೆ ನಾವು ಬದುಕಿದ್ದೀವಿ. ನಾವು ಬದುಕಲಿಕ್ಕೆ ಏನೇನು ಬೇಕು ಅದೆಲ್ಲ ಈ ಜಗತ್ತಿನಲ್ಲಿ ಅದ. ಈ ಮಣ್ಣು ಅನ್ನ, ಈನೀರು ಅನ್ನ ಈ ಗಾಳಿ, ಬೆಳಕು, ಬಯಲು ಅನ್ನ ಪ್ರತಿ ಕ್ಷಣ ತೆಗೆದುಕೊಳ್ಳವ ಗಾಳಿ, ನೀರು ಬೆಳಕನ್ನು ನಾವು ಬಯಸಿದ್ದೀವಿ ಇದರ ಮೇಲೆಯೇ ಬದುಕು ನಿಂತಿದೆ. ಆ ಕಾರಣ ದಾರ್ಶನಿಕರು ಜಗತ್ತನ್ನ ದೇವರೆಂದು ಹೇಳಿದರು. ಇದೇ ನಮ್ಮನ್ನು ಕಾಪಾಡುತ್ತದೆ ಅದಕ್ಕೆ ನಾವು ಇದಕ್ಕೆ ಪೂಜಿಸುತ್ತೀವಿ.
ನಮ್ಮದು ಎನ್ನುವದೇನಿದೆ ಈ ಜಗತ್ತಿನಲ್ಲಿ. ಹೊರಗಿನಿಂದ ನೀರು, ಬಳಕು ಅನ್ನ ಎಲ್ಲಾ ಹೊರಿನಿಂದ ಅದ. ಪ್ರತಿ ಕ್ಷಣ ಕ್ಷಣ ಊಟ ಮಾಡುತ್ತಾ ಇದ್ದೀವಿ. ರೂಪ, ಶಬ್ಧ ಸ್ಪರ್ಶವು ಅನ್ನ. ಅನ್ನದ ಮೇಲೆ ಜೀವ ನಿಂತಿದೆ. ಅನ್ನವೇ ದೇವರು. ಇಂತಹ ಅನ್ನದ ಮೇಲೆ ನಾವೆಲ್ಲ ನಿಂತಿರುವುದು. ಯಾರಿಗೆ ಅನ್ನ ಬೇಡವೆ, ನೀರು, ನೆಲ ಗಾಳಿ ಬೇಡವೇ. ಒಂದೇ ಒಂದು ಕ್ಷಣ ಬದಲಾಯಿತು ಅಂದ್ರೆ ಎಲ್ಲವೂ ಒಯ್ದಾಡಬೇಕಾಗುತ್ತದೆ.
ಒಂದು ಕ್ಷಣ ಸುಮ್ಮನೆ ಕುಳಿತು ಯಾರು ನನ್ನವರು.? ಯಾರದು ಸಂಪತ್ತು..ನನ್ನ ಶರೀರ ಇದು ಯಾರದು.? ನನ್ನ ಮನಸ್ಸು ಇದು ಯಾರದು..ಯಾರು ರಚಿಸಿರುವುದು ಈ ದೇಹವನ್ನ ಇದು ಚಿಂತನೆ ಮಾಡಬೇಕಿದೆ. ಯಾರು ಮಿತ್ರರು ಯಾರು ವೈರಿಗಳು ಯೋಚನೆ ಮಾಡು. ಏನಾದವು ಜನ್ಮ ಏನದ ಮರ್ಮ ಯಾರು ನಾನು ಯೋಚನೆ ಮಾಡು. ಆಗ ಜ್ಞಾನ ಮೂಡುತ್ತದೆಯಲ್ಲ ಅದು ಅಧ್ಯಾತ್ಮಕ ಜ್ಞಾನ. ಯಾವುದು ನಮ್ಮದಲ್ಲ ಯಾವುದು ಅವರದಲ್ಲ. ಕಲಬುರ್ಗಿ ನಮ್ಮದು ಅಂತೀವಿ. ಕಲಬುರ್ಗಿ ಮೊದಲೇ ಅದ. ಈ ನೆಲ ಮೊದಲೇ ಅದ. ಇದು ಯಾರದು ಅಲ್ಲ. ನಾವೆಲ್ಲ ನಾಲ್ಕು ದಿವಸ ಬಂದೀವಿ. ಅಷ್ಟೆ. ಮನೆ ಕಟ್ಟುಕೊಂಡೀವಿ ನಮ್ಮ ಹೆಸರು ಬರ್ಕೊಂಡೀವಿ. ಅಷ್ಟೆ, ನನ್ನದೆ ತೊಗಂಡಾನ ತನ್ನ ಹೆಸರು ಹಾಕ್ಯಾನ ಇದುವೇ ಸಂಸಾರ.
ಅಲ್ಲಮ ಪ್ರಭುಗಳ ವಿಚಾರದಲ್ಲಿ ಇಡಿ ಜಗತ್ತು ದೇವರ ಅಡುಗೆ ಮನೆ. ಇಲ್ಲಿ ಎಲ್ಲವೂ ಸಿದ್ಧವಾಗಿದೆ. ಆ ಮೆಲೆ ನಮ್ಮನ್ನ ಇಲ್ಲಿ ತಂದು ಬಿಡಲಾಗಿದೆ. ಜಗತ್ತಿನಲ್ಲಿ ಎಲ್ಲವೂ ಇದೆ. ನಾವು ಅನುಭವಿಸಬೇಕಷ್ಟೆ. ವಿವಿಧ ರೀತಿ ಸಸ್ಯಕಾಶಿ, ಹಣ್ಣುಗಳು ಬಾಣಸದ ಮನೆ ನಾವೆಲ್ಲ ಊಟ ಮಾಡುವಾಗ ಇದು ದೇವರು ರೂಪಿಸಿದ ಅನ್ನವೆಂದು ಊಟ ಮಾಡಿ. ಇಲ್ಲಿ ಎಲ್ಲವೂ ತಯಾರಾಗುತ್ತದೆ. ಎಲ್ಲವೂ ಮಿಶ್ರಣವಿದೆ. ನಿಸರ್ಗ ನೋಡಿ ನಾವು ಕಲಿಯಬೇಕು. ಅಕ್ಕಿಯೊಳಗ ಕಲ್ಲು ಹಾಕಿ ನಾವು ಮಾರಾಟ ಮಾಡುತ್ತೇವೆ. ಹಾಲು, ದವಸ ಧಾನ್ಯ ನಾವು ಮಾಡ್ತೀವಿ ಏನು. ಇದು ಪವಾಡ. ನಾವು ಒಂದು ಲೀಟರ್ ಹಾಲು ತೆಗೆದುಕೊಂಡು ಎರಡು ಲೀಟರ್ ಮಾಡ್ತೀವಿ. ಅದು ಎಮ್ಮೆ ಏನನ್ನ ಬೇಡ ಹೇಳಿ..ಎಲ್ಲರೂ ಚಲೋ ಇರಲಿ ಎಂದು ಶಕ್ತಿಯುತ ಹಾಲು ಕೊಟ್ಟರೆ ನೀವು ಅದನ್ನು ಕೆಡಿಸಿಕೊಂಡು ಹಾಳಾಗುತ್ತೀರಲ್ಲ ಎನ್ನುವದಿಲ್ಲವೇನು.? ನೀನೆಂಥ ಬುದ್ಧಿವಂತ ಎಂದು ಅದ್ಭುತವಾಗಿ ಬದುಕಿನ ಪಾಠವನ್ನು ಸವಿವರವಾಗಿ ಶ್ರೀಗಳು ಹೇಳಿದರು.