ಪ್ರಮುಖ ಸುದ್ದಿ

ಶಹಾಪುರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ

 

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ನಾಗರಿಕ ಯುವ ವೇದಿಕೆವತಿಯಿಂದ ಫೆ.16 ಶುಕ್ರವಾರ ಮದ್ಯಾಹ್ನ 3 ಗಂಟೆಗೆ ಪಟ್ಟಣದ ಚರಬಸವೇಶ್ವರ ಕಮಾನ್‍ದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಭಾಗವಹಿಸಬೇಕೆಂದು ವೇದಿಕೆ ಮನವಿ ಮಾಡಿದೆ.

ಅಲ್ಲದೆ ಪ್ರತಿಭಟನೆ ವೇಳೆ ವ್ಯಾಪಾರಸ್ಥರು ಸಾರ್ವಜನಿಕರು ಸಹಕಾರ ನೀಡಬೇಕು. ನಗರದಲ್ಲಿ ಇತ್ತೀಚೆಗೆ ಅಪಘಾತಗಳು ಸಾಕಷ್ಟು ನಡೆಯುತ್ತಿವೆ. ಹೆದ್ದಾರಿಯಲ್ಲಿ ರಾತ್ರಿ ಹಗಲು ಲಾರಿ, ಟಿಪ್ಪರ್ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿವೆ. ದೊಡ್ಡ ವಾಹನಗಳ ಚಾಲಕರು ಸಂಪೂರ್ಣ ನಿರ್ಲಕ್ಷವಹಿಸುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ.

ಮೊನ್ನೆ ಮೊನ್ನೆ ನಗರದ ಚಿರಪರಿಚಿತ ಗಿರಿ ಜಾಕಾ ಮತ್ತು ಸಂತೋಷ ಹಳಿಮನಿ ಎಂಬ ಇಬ್ಬರು ಯುವಮಿತ್ರರು ಅಪಘಾತದಿಂದ ಸಾವನ್ನಪ್ಪಿದ್ದಾರೆ. ಕಬ್ಬು ತುಂಬಿಕೊಂಡು ಹೊರಟ್ಟಿದ್ದ ಲಾರಿ ಈ ಇಬ್ಬರ ಜೀವ ನುಂಗಿದೆ. ಇದಕ್ಕೆ ಚಾಲಕನ ನಿರ್ಲಕ್ಷ, ಮಧ್ಯ ಸೇವನೆ ಮಾಡಿರುವುದೆ ಕಾರಣ, ಇಂತಹ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಇಂತಹ ದುರ್ಘಟನೆ ತಡೆಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳನ್ನು ಕೈಗೊಳ್ಳಬೇಕಿದೆ.

ಆ ನಿಟ್ಟಿನಲ್ಲಿ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದು ಪಕ್ಷಾತೀತ ಜಾತ್ಯಾತೀತವಾದ ಪ್ರತಿಭಟನೆ, ವಯಸ್ಕರು ಯುವಕರು ಎಲ್ಲರೂ ಭಾಗವಹಿಸಬೇಕು ಎಂದು ವೇದಿಕೆ ಕರೆ ನೀಡಿದೆ. ನಗರದಲ್ಲಿ ಅಪಘಾತ ತಡೆಗೆ ಹಲವು ಉಪಯುಕ್ತ ಕಾರ್ಯಗಳನ್ನು ತಕ್ಷಣಕ್ಕೆ ಕೈಗೊಳ್ಳಬೇಕಿದೆ.

ಸಿಬಿ ಕಮಾನ್, ಬಸವೇಶ್ವರ ವೃತ್ತ, ಗ್ಯಾರೇಜ್ ಲೈನ್ ಸೇರಿದಂತೆ ಹಲವಡೆ ಸಂಚಾರಿ ಮಾರ್ಗಸೂಚಿ ದೀಪಗಳನ್ನು ಅಳವಡಿಸಬೇಕು. ಮತ್ತು ರೋಡ್ ಡಿವೈಡರ್‍ಗಳನ್ನು ನಿರ್ಮಿಸಬೇಕು ಅಲ್ಲದೆ ಪ್ರಮುಖ್ಯವಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಠಾಣೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಬೇಕಿದೆ. ಕಾರಣ ಎಲ್ಲರೂ ದಯವಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ವೇದಿಕೆ ಮನವಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button