ಸದನದಲ್ಲಿ ಕ್ಷಮೆ ಕೇಳಿದ ಶಾಸಕ ಹ್ಯಾರಿಸ್
ಬೆಂಗಳೂರಃ ತನ್ನ ಮಗನ ಆಟಾಟೋಪಕ್ಕೆ ಬೇಸತ್ತು ಸದನದಲ್ಲಿ ಸರ್ಕಾರ ಮತ್ತು ಪತ್ರಕರ್ತರಿಗೂ ಕ್ಷಮೆ ಕೋರಿ ಮಾತನಾಡಿದ ಶಾಸಕ ಹ್ಯಾರಿಸ್,
ಎಲ್ಲರಿಗೂ ಮಕ್ಕಳಿದ್ದಾರೆ, ತಪ್ಪು ಮಾಡಿರುವುದು ಸತ್ಯ ಅದಕ್ಕೆ ನನ್ನ ಮಗನಿಗೆ ಬುದ್ಧಿವಾದ ಹೇಳುವ ಕೆಲಸ ಮಾಡುತ್ತೇನೆ. ಆದರೆ ಸದನದಲ್ಲಿ ಪದೇ ಪದೇ ಅದನ್ನೆ ಹೇಳುವುದು ಸರಿಯಲ್ಲ.
ಶವಕ್ಕೆ ಚೂರಿ ತಗೊಂಡು ಚುಚ್ಚಿದಂತಾಗುತ್ತದೆ. ನನಗೂ ತುಂಬಾ ನೋವಾಗಿದೆ. ಆದರೆ ಮಗ ತಪ್ಪು ಮಾಡಿದ್ದಾನೆ, ಅಂತ ನಾವು ನನ್ನ ಮಗ ಅಲ್ಲ ಎನ್ನುವದಕ್ಕಾಗುತ್ತಾ ಯಾವ ತಂದೆಯೂ ಹಾಗೇ ಹೇಳಲಿಕ್ಕೆ ಬರಲ್ಲ.
ಘಟನೆ ನಡೆದು ಒಂದು ದಿನ ಕಳೆದರೂ ನನಗೆ ನನ್ನ ಮಗ ಫೋನಲ್ಲೂ ಸಿಕ್ಕಿಲ್ಲ. ಎದುರಿಗೆ ಸಿಕ್ಕಿದಿದ್ದರೆ ಹೊಡೆದು ಬೈದು ಬುದ್ಧಿವಾದ ಹೇಳಬಹುದು.
ಆತನ ಸ್ನೇಹಿತರನ್ನು ಕಾಂಟ್ಯಾಕ್ಟ್ ಮಾಡಿ ಸಮಸ್ಯೆ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಯಾರ ಮಕ್ಕಳೇ ಆಗಲಿ ಇಂತಹ ಕೆಲಸ ಮಾಡಿದ್ದಲ್ಲಿ ಅದು ತಪ್ಪು ತಪ್ಪೇ ಅದನ್ನು ನ್ಯಾಯಾಲಯ ಶಿಕ್ಷೆ ವಿಧಿಸಲಿದೆ ಎಂದ ಅವರು ಯಾವ ತಂದೆಗೂ ಇಂತಹ ಸ್ಥಿತಿ ಬಾರದಿರಲಿ ಎಂದು ಸೃಷ್ಟಿಕರ್ತನ ಹತ್ತಿರ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಪ್ರಕರಣವನ್ನು ದಿಕ್ಕು ತಪ್ಪಿಸ್ತಾರ ಪೊಲೀಸರು..?
ಶಾಸಕ ಎಸ್.ಎನ್.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಪ್ರಕರಣ ವನ್ನು ಹಳ್ಳ ಹಿಡಿಯುವ ಸಾಧ್ಯತೆ ಕಂಡು ಬರುತ್ತಿದೆ.
ಕಾರಣ ನಲಪಾಡ್ ಜೊತೆಗಿದ್ದ ಸ್ನೇಹಿತ ಅರುಣ್ ಮೂಲಕ ಕೌಂಟರ್ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದ್ದು,
ನಲಪಾಡ್ ಹಾಗೂ ಸ್ನೇಹಿತರು ಹೊರಟಿದ್ದಾಗ ಅಡ್ಡಲಾಗಿ ಕಾಲು ಹಾಕುವ ಮೂಲಕ ಗಾಯಾಳು ವಿದ್ವತ್ ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ ಠಾಣೆಯಲ್ಲಿ ನಲಪಾಡ್ ಹಾಗೂ ಸ್ನೇಹಿತರಿಗೆ ರಾಜಮರ್ಯಾದೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಪೊಲೀಸರೇ ಆರೋಪಿಗಳಿಗೆ ಇದೇ ರೀತಿ ಹೇಳಿಕೆ ನೀಡುವಂತೆ ಸೂಚಿಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.