ಪ್ರಮುಖ ಸುದ್ದಿ
ಕಲಬುರಗಿ NEKRTC ಡಿಪೋ 3 ರಲ್ಲಿ ಭಾರಿ ಅಗ್ನಿ ಅವಘಡ
ಕಲಬುರ್ಗಿಃ ನಗರದ ಬಸ್ ಡಿಪೋ ನಂ-3 ರ ಘಟಕದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಹಲವು ಬಸ್ಗಳಿಗೆ ವ್ಯಾಪಿಸಿದ್ದು, ಡಿಪೋ ಹೊತ್ತು ಉರಿಯುತ್ತಿರವ ಘಟನೆ ಜರುಗಿದೆ.
ನೂರಾರು ಟೈರ್ಗಳಿಗೆ ಬೆಂಕಿ ತಗುಲಿದ್ದು, ಆರು ಬಸ್ಗಳು ಸುಟ್ಟು ಭಸ್ಮವಾಗಿವೆ, ಡಿಪೋ ತುಂಬಾ ದಟ್ಟವಾಗಿ ಬೆಂಕಿ, ಹೊಗೆ ಆವರಿಸಿದೆ.
ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತಿದ್ದಾರೆ.
ಡಿಪೋದಲ್ಲಿ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಕಾಮಗಾರಿ ನಡೆದಿರುವಾಗ ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ತಗುಲಿರುವ ಸಾಧ್ಯತೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.