ಪ್ರಮುಖ ಸುದ್ದಿ
ಮತ್ತೊಂದು ಅಪಘಾತಃ ಟಂಟಂ-ಲಾರಿ ನಡುವೆ ಡಿಕ್ಕಿ ಇಬ್ಬರು ದರ್ಮರಣ
ಕಲಬುರ್ಗಿಃ ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಟಂಟಂ ಆಟೋ ಮೂಲಕ ಮನೆಗೆ ವಾಪಾಸ ಆಗುತ್ತಿರುವ ವೇಳೆ ಟಂಟಂವೊಂದಕ್ಕೆ ಲಾರೊಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ ಕ್ರಾಸ್ ಬಳಿ ನಡೆದಿದೆ.
ಹೊನ್ನಪ್ಪ ಪೂಜಾರಿ (55), ಕಾಮಣ್ಣ ಪೂಜಾರಿ(48) ಮೃತ ದುರ್ದೈವಿಗಳು. ಮೃತರು ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದವರು ಎನ್ನಲಾಗಿದೆ. ಗಾಯಾಳುಗಳನ್ನು ಕಲಬುರ್ಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.